ಕೊಪ್ಪಳ: ರಾಜ್ಯ ಸರ್ಕಾರ ಕೋವಿಡ್ ಪರಿಹಾರ ವಿಶೇಷ ಪ್ಯಾಕೇಜ್ ನಲ್ಲಿ ಬಟ್ಟೆ ಹೊಲಿಯುವುದನ್ನೇ ನಂಬಿರುವ ಕಾರ್ಮಿಕರ ಬದುಕು ಕಷ್ಟವಾಗಿದ್ದು, ಅವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಇ ದರ್ಜಿಗಳು ಹಾಗು ಕಾರ್ಮಿಕರ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಕೊಪ್ಪಳ: ಟೈಲರ್ಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ - Corona effect on tailors
ಕೊರೊನಾ ಭೀತಿಯಿಂದ ಆದ ಲಾಕ್ ಡೌನ್ ಹಾಗು ಪ್ರಸ್ತುತ ಸನ್ನಿವೇಶದಿಂದ ಟೈಲರ್ಗಳ ಬದುಕು ಶೋಚನೀಯವಾಗಿದೆ. ಹಾಗಾಗಿ ನಮಗೂ ಪರಿಹಾರ ಒದಗಿಸಿ ಎಂದು ದರ್ಜಿಗಳು ಹಾಗು ಕಾರ್ಮಿಕರ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಕುರಿತಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಸರ್ಕಾರ ತಮ್ಮ ನೆರವಿಗೂ ಬರುವಂತೆ ಆಗ್ರಹಿಸಿದೆ. ಕೊರೊನಾ ಭೀತಿಯಿಂದ ಆದ ಲಾಕ್ ಡೌನ್ ಹಾಗು ಪ್ರಸ್ತುತ ಸನ್ನಿವೇಶದಿಂದ ದರ್ಜಿಗಳ ಬದುಕು ಸಹ ಶೋಚನೀಯವಾಗಿದೆ. ದಿನಗೂಲಿ ಮಾಡಿಕೊಂಡು ನಾವು ಬದುಕಬೇಕು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಲ್ಲಿ ಅಸಂಘಟಿತ ದರ್ಜಿಗಳಿಗೂ ಪರಿಹಾರದ ಬಗ್ಗೆ ಉಲ್ಲೇಖಿಸಿದೆ.
ಆದರೆ ಅನುದಾನ ಹಾಗು ಅರ್ಹತೆಯ ಬಗ್ಗೆ ಯಾವುದೇ ಆದೇಶವಿಲ್ಲ. ಇದರಿಂದಾಗಿ ನಮಗೆ ಈವರೆಗೂ ಯಾವುದೇ ಪರಿಹಾರ ದೊರಕಿಲ್ಲ. ಹೀಗಾಗಿ ಇದನ್ನು ಸರಿಪಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.