ಕರ್ನಾಟಕ

karnataka

ETV Bharat / state

ರಸ್ತೆ ದುಃಸ್ಥಿತಿಯಿಂದ ಸ್ಥಗಿತಗೊಂಡ ಬಸ್ ಸಂಚಾರ: ವಿದ್ಯಾರ್ಥಿಗಳ ಪರದಾಟ - ಕೊಪ್ಪಳ ತಾಲೂಕಿನಲ್ಲಿ ಬಸ್ ಸಮಸ್ಯೆ

ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಿಂದ ದದೇಗಲ್ ಕ್ರಾಸ್​​​ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದ ಗ್ರಾಮದ ಜನರು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

Koppal taluk Naregal people and students facing bus problem
ರಸ್ತೆ ದುಸ್ಥಿತಿಯಿಂದ ಸ್ಥಗಿತಗೊಂಡ ಬಸ್ ಸಂಚಾರ

By

Published : Sep 29, 2021, 1:10 PM IST

ಕೊಪ್ಪಳ:ರಸ್ತೆ ಹಾಳಾಗಿ ಹೋಗಿರುವುದರಿಂದ ಸರಿಯಾದ ಬಸ್​ ಸಂಚಾರ ಇಲ್ಲದೇ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ರಸ್ತೆ ದುಃಸ್ಥಿತಿಯಿಂದ ಸ್ಥಗಿತಗೊಂಡ ಬಸ್ ಸಂಚಾರ

ತಾಲೂಕಿನ ನರೇಗಲ್ ಗ್ರಾಮದಿಂದ ದದೇಗಲ್ ಕ್ರಾಸ್​​​ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದ ಗ್ರಾಮದ ಜನರು, ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ರಸ್ತೆ ಸಂಪೂರ್ಣ ಹಾಳಾದ ಕಾರಣ ಗ್ರಾಮಕ್ಕೆ ಯಾವುದೇ ಬಸ್ ಬರುತ್ತಿಲ್ಲ. ಇದರಿಂದ ಕೊಪ್ಪಳ ನಗರದ ಶಾಲಾ - ಕಾಲೇಜುಗಳಿಗೆ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ಗ್ರಾಮದಲ್ಲಿ ಯಾರಿಗಾದರೂ ಖಾಯಿಲೆ ಬಂದರೆ, ಹೆರಿಗೆ ನೋವು ಕಾಣಿಸಿಕೊಂಡರೆ ಆ್ಯಂಬುಲೆನ್ಸ್​​ಗೆ ಕರೆ ಮಾಡಿದರೆ ನಿಮ್ಮ ಗ್ರಾಮದ ರಸ್ತೆ ಸರಿಯಿಲ್ಲ. ಹೀಗಾಗಿ ನಾವು ಬರುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರಂತೆ. ಬಸ್ ಚಾಲಕರೂ ಸಹ ನರೇಗಲ್ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಾರೆ.

ಇದರಿಂದ ನಮ್ಮೂರಿಗೆ ಬಸ್ ಸಂಚಾರ ನಿಂತು ಹೋಗಿದೆ. ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳು ರಸ್ತೆ ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರೆದುರೇ ಕಳಚಿ ಹೋಯ್ತು ಕಾನೂನು ಸಚಿವರ ಪಂಚೆ

ABOUT THE AUTHOR

...view details