ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ನಾಳೆಯಿಂದ ಜುಲೈ 25 ರವರೆಗೆ ಸ್ವಯಂಪ್ರೇರಿತವಾಗಿ ಕೊಪ್ಪಳ ಲಾಕ್‌ಡೌನ್ ಆಗಲಿದೆ.
ಇಂದು ನಗರ ಸಭೆಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರ ನೇತೃತ್ವದಲ್ಲಿ ನಡೆದ, ವಿವಿಧ ವರ್ತಕರ ಸಂಘದ ಮುಖಂಡರ ಸಭೆಯಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ.
ಬಟ್ಟೆ ಅಂಗಡಿ, ದಿನಸಿ ಅಂಗಡಿ, ಮಾಂಸದಂಗಡಿಗಳು, ತರಕಾರಿ, ಹೂ ಹಣ್ಣು ಅಂಗಡಿಗಳು, ಬೀದಿ ಬದಿಯ ಅಂಗಡಿಗಳು ಸೇರಿದಂತೆ ವಿವಿಧ ಬಹುತೇಕ ಎಲ್ಲ ಬಗೆಯ ಅಂಗಡಿಗಳು, ಜುಲೈ 25 ರವರೆಗೆ ಮಧ್ಯಾಹ್ನದ 2 ಗಂಟೆಯ ನಂತರ ಸಂಪೂರ್ಣ ಬಂದ್ ಆಗಲಿವೆ.
ನಾಳೆಯಿಂದ ಕೊಪ್ಪಳ ಸ್ವಯಂಪ್ರೇರಿತ ಲಾಕ್‌ಡೌನ್ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಸ್ವಯಂಪ್ರೇರಿತವಾಗಿ ನಿರ್ಧರಿಸಲಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಮಾಡುವುದರಿಂದ ಕೊರೊನಾ ಕಂಟ್ರೋಲ್ ಮಾಡಲು ಒಂದಿಷ್ಟು ಸಹಾಯಕವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಸುವಂತೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮನವಿ ಮಾಡಿದ್ದಾರೆ.