ಕುಷ್ಟಗಿ (ಕೊಪ್ಪಳ) : ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿರುವ ಮಣ್ಣನ್ನು ಚರಂಡಿಗೆ ಹಾಕುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಮಣ್ಣನ್ನು ಚರಂಡಿಗೆ ಹಾಕುತ್ತಿರುವುದಕ್ಕೆ ಸ್ಥಳೀಯರ ಆಕ್ರೋಶ - ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ
ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿರುವ ಮಣ್ಣನ್ನು ಚರಂಡಿಗೆ ಹಾಕುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿ ಟೆಂಗುಂಟಿ ಕ್ರಾಸ್ ಬಳಿ ಮೇಲ್ಸೇತುವೆ ಅಡಿಯಲ್ಲಿ ಡಾಂಬರೀಕರಣ ಕೆಲಸ ನಡೆದಿದೆ. ಸರ್ವೀಸ್ ರಸ್ತೆಯ ಡಾಂಬರೀಕರಣಕ್ಕಾಗಿ ಮೇಲ್ಮೈನ ಮಣ್ಣನ್ನು ತೆಗೆದು, ಚರಂಡಿ ಮೇಲೆ ಹಾಕುತ್ತಿದ್ದಾರೆ. ಇದರಿಂದ ಚರಂಡಿ ಮುಚ್ಚುವ ಸಾಧ್ಯತೆಗಳಿವೆ. ಹೆದ್ದಾರಿ ಬದಿಯ ಚರಂಡಿಯ ಸ್ಲ್ಯಾಬ್‌ಗಳು ಕಿತ್ತು ಹೋಗಿದ್ದು, ಇದನ್ನು ಸರಿಪಡಿಸದೆ ಸರ್ವೀಸ್ ರಸ್ತೆಯ ಮಣ್ಣನ್ನು ಚರಂಡಿಯೊಳಗೆ ಹಾಕುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೂಡಲೇ ಚರಂಡಿಯೊಳಗೆ ಸುರಿದ ಮಣ್ಣನ್ನು ತೆರವುಗೊಳಿಸಬೇಕು, ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸಿ, ಪೂರ್ತಿ ಕಿತ್ತು ಹೋಗಿರುವ ಚರಂಡಿಯನ್ನು ಸರಿಪಡಿಸಬೇಕು ಎಂದು ಅಶೋಕ ಬಳೂಟಗಿ ಒತ್ತಾಯಿಸಿದ್ದಾರೆ.