ಗಂಗಾವತಿ:ರಾಜ್ಯದಲ್ಲಿ ಹಿಂದು ಮತ್ತು ಮುಸಲ್ಮಾನರ ಮಧ್ಯೆ ನಡೆಯುತ್ತಿರುವುದು ಧರ್ಮ ಸಂಘರ್ಷವಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅಷ್ಟೆ. ರಾಜ್ಯದಲ್ಲಿ ನಡೆಯುತ್ತಿರುವುದು ಧರ್ಮ ಸಂಘರ್ಷ ಅಂತಾ ನನಗ ಅನಿಸಲ್ಲ. ಕಾಂಗ್ರೆಸ್ ಮತ್ತು ಮತಾಂಧ ನಾಯಕರು ಅದಕ್ಕೆ ಧರ್ಮ ಸಂಘರ್ಷ ಎಂದು ಬಣ್ಣ ಕಟ್ಟಿ ಹಿಂದುಗಳ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಹಿಂದುಪರ ಸಂಘಟನೆಗಳ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಮಸೀದಿಗಳಲ್ಲಿ ದೇವಸ್ಥಾನಗಳು ಪತ್ತೆಯಾಗಿರೋದು ಹೊಸತಲ್ಲ. ಮೊಗಲರು ಅಳ್ವಿಕೆ ಮಾಡಿದಾಗ ದೇವಸ್ಥಾನ ಕೆಡವಿ ಮಸೀದಿ ಕಟ್ಟಿರೋದು ನಾವು ಇತಿಹಾಸದಲ್ಲಿ ಓದಿದ್ದೇವೆ. ಇದು ಯಾವೂದೂ ಕಟ್ಟು ಕಥೆ ಅಲ್ಲ. ಸತ್ಯ ಘಟನೆಗಳು. ಕಾಲಕ್ರಮೇಣ ಹೊರ ಬರುತ್ತವೆ ಅಷ್ಟೆ. ಮಳಲಿ ಭಾಗದಲ್ಲಿ ಮಾತ್ರ ಅಲ್ಲ, ದೇಶದ ಯಾವುದೇ ಭಾಗದಲ್ಲಿನ ಮಸೀದಿ ತೆರವು ಮಾಡಿದರೆ ಅಲ್ಲಿ ದೇವಸ್ಥಾನ ಕಾಣಸಿಗುತ್ತೆ. ದೈವಿ ಸಂಕಲ್ಪ ಜಾಗೃತಿಯಾದಾಗ ಇಂತಹ ಹೊಸ ವಿಚಾರಗಳು ಬೆಳಕಿಗೆ ಬರತ್ತೆ ಎಂದು ಹೇಳಿದರು.