ಕರ್ನಾಟಕ

karnataka

ETV Bharat / state

ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಕೊಪ್ಪಳ ಪೊಲೀಸ್​​​ ಸಿಬ್ಬಂದಿ - ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಕೊಪ್ಪಳ ಪೊಲೀಸ್​ ಸಿಬ್ಬಂದಿ

ದೇಶಾದ್ಯಂತ ಲಾಕ್​ಡೌನ್ ಆಗಿದ್ದರಿಂದ ಮೂಕ ಪ್ರಾಣಿಗಳ ಗೋಳು ನಿಜಕ್ಕೂ ಮರುಕ ಹುಟ್ಟಿಸುತ್ತಿದೆ. ಇದನ್ನು ಕಂಡ ಕೊಪ್ಪಳ ಗ್ರಾಮೀಣ‌ ಠಾಣೆಯ ಪೊಲೀಸರು ಕೋತಿಗಳಿಗೆ ಬಾಳೆಹಣ್ಣು ನೀಡಿ, ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

Koppal police distribute banana for monkeys
ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಕೊಪ್ಪಳ ಪೊಲೀಸ್​ ಸಿಬ್ಬಂದಿ

By

Published : Mar 28, 2020, 4:52 PM IST

ಕೊಪ್ಪಳ:ಕೊರೊನಾ ನಿಯಂತ್ರಣ ಹಿನ್ನೆಲೆ ದೇಶಾದ್ಯಂತ ಲಾಕ್​​ಡೌನ್ ಆಗಿದ್ದರಿಂದ ಮೂಕ ಪ್ರಾಣಿಗಳ ಗೋಳು ನಿಜಕ್ಕೂ ಮರುಕ ಹುಟ್ಟಿಸುತ್ತಿದೆ. ಇದರಿಂದಾಗಿ ಕೋತಿಗಳಿಗೆ ಪೊಲೀಸರು ಹಣ್ಣು ಹಾಗೂ ನೀರು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪಿಎಸ್ಐ ಸುರೇಶ

ನಗರದ ಹೊರವಲಯದಲ್ಲಿರುವ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದ ಬಳಿಯ ಬೆಟ್ಟದಲ್ಲಿ ನೂರಾರು ಕೋತಿಗಳಿವೆ. ಈ ಕೋತಿಗಳಿಗೆ ಇಷ್ಟು ದಿನ ದೇವಸ್ಥಾನಕ್ಕೆ ಬರುವವರು ಹಣ್ಣುಕಾಯಿ ನೀಡುತ್ತಿದ್ದರು. ಆದ್ರೆ ಲಾಕ್​​ಡೌನ್ ಹಿನ್ನೆಲೆಯಲ್ಲಿ ಯಾರೂ ದೇವಸ್ಥಾನಕ್ಕೆ ಬರುತ್ತಿಲ್ಲ. ಇದರಿಂದಾಗಿ ಕೋತಿಗಳು ಆಹಾರ, ನೀರಿಗಾಗಿ ಪರದಾಡುತ್ತಿವೆ.

ಪರಿಸ್ಥಿಯನ್ನು ಗಮನಿಸಿದ ಗ್ರಾಮೀಣ‌ ಠಾಣೆಯ ಪಿಎಸ್ಐ ಸುರೇಶ, ತಮ್ಮ ಸಿಬ್ಬಂದಿಯೊಂದಿಗೆ ಬಂದು ಕೋತಿಗಳಿಗೆ ಬಾಳೆಹಣ್ಣು ನೀಡಿದರು. ಅಲ್ಲದೆ ಅಲ್ಲಿ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

For All Latest Updates

ABOUT THE AUTHOR

...view details