ಕೊಪ್ಪಳ:ಜಿಲ್ಲೆಯಲ್ಲಿ ಈಗಾಗಲೇ ಮೂರು ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದರೂ ಜನರು ಮಾತ್ರ ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಕಾರಟಗಿ ಪಟ್ಟಣದಲ್ಲಿ ಬಡವರಿಗೆ ಅಕ್ಕಿ ಪ್ಯಾಕೇಟ್ ವಿತರಿಸಿದ್ದು, ಇದನ್ನು ಪಡೆಯುವ ಆತುರದಲ್ಲಿ ಜನರು ಮುಗಿಬಿದ್ದಿದ್ದರು.
ಕೊಪ್ಪಳ: ಸಾಮಾಜಿಕ ಅಂತರ ಮರೆತು ಅಕ್ಕಿ ಪ್ಯಾಕೇಟ್ ಪಡೆಯಲು ಮುಗಿಬಿದ್ದ ಜನ - ಶಾಸಕ ಬಸವರಾಜ ದಡೇಸೂಗೂರು
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಶಾಸಕ ಬಸವರಾಜ ದಡೇಸುಗೂರು ಔಪಚಾರಿಕವಾಗಿ ಒಂದಿಬ್ಬರಿಗೆ ಅಕ್ಕಿ ಪ್ಯಾಕೇಟ್ ವಿತರಣೆ ಮಾಡಿ ಅಲ್ಲಿಂದ ತೆರಳಿದರು. ಅವರು ಅತ್ತ ತೆರಳುತ್ತಿದ್ದಂತೆ ಸಾಮಾಜಿಕ ಅಂತರ ಮರೆತ ಜನ ಎದ್ದು ಬಿದ್ದು ಅಕ್ಕಿಗಾಗಿ ಮುಗಿಬಿದ್ದರು.
ಅಕ್ಕಿ ಪ್ಯಾಕೇಟ್ ಪಡೆಯೋಕೆ ಹೇಗೆ ಮುಗಿಬಿದ್ರು ಗೊತ್ತಾ
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸಮ್ಮುಖದಲ್ಲಿ ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಬಡವರಿಗೆ ಅಕ್ಕಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಕ್ಕಿ ಪಡೆಯಲು ನೂರಾರು ಜನರು ಆಗಮಿಸಿದ್ದರು.