ಕರ್ನಾಟಕ

karnataka

ETV Bharat / state

ಸೇವೆಗೆ ಹಾಜರಾಗಿ, ಇಲ್ಲವಾದಲ್ಲಿ ನೇಮಕದಿಂದ ಕೈಬಿಡಲಾಗುವುದು..ತರಬೇತಿ ಹಂತದ ನೌಕರರಿಗೆ ಖಡಕ್​ ನೋಟಿಸ್​! - ಐವರು ತರುಭೇತುದಾರರಿಗೆ ಕೊಪ್ಪಳ ಕೆಎಸ್​ಆರ್​ಟಿಸಿ ವಿಭಾಗ ನೋಟಿಸ್ ಎಚ್ಚರಿಕೆ,

ಸೇವೆಗೆ ಹಾಜರಾಗಿ, ಇಲ್ಲವಾದಲ್ಲಿ ನೇಮಕಾತಿಯಿಂದ ಕೈಬಿಡಲಾಗುವುದು ಎಂದು ತರಬೇತಿ ಹಂತದ ನೌಕರರಿಗೆ ಕೊಪ್ಪಳ ಕೆಎಸ್​ಆರ್​ಟಿಸಿ ವಿಭಾಗ ಖಡಕ್​ ನೋಟಿಸ್​ ಜಾರಿ ಮಾಡಿದೆ.

Koppal ksrtc division notice, Koppal ksrtc division notice warn, Koppal ksrtc division notice warn to five trainee members, Koppal ksrtc division notice news, ಕೊಪ್ಪಳ ಕೆಎಸ್​ಆರ್​ಟಿಸಿ ವಿಭಾಗ ನೋಟಿಸ್​, ಕೊಪ್ಪಳ ಕೆಎಸ್​ಆರ್​ಟಿಸಿ ವಿಭಾಗ ನೋಟಿಸ್ ಎಚ್ಚರಿಕೆ, ಐವರು ತರುಭೇತುದಾರರಿಗೆ ಕೊಪ್ಪಳ ಕೆಎಸ್​ಆರ್​ಟಿಸಿ ವಿಭಾಗ ನೋಟಿಸ್ ಎಚ್ಚರಿಕೆ, ಕೊಪ್ಪಳ ಕೆಎಸ್​ಆರ್​ಟಿಸಿ ವಿಭಾಗ ನೋಟಿಸ್ ಸುದ್ದಿ,
ತರಬೇತಿ ಹಂತದ ನೌಕರರಿಗೆ ಖಡಕ್​ ನೋಟಿಸ್

By

Published : Apr 10, 2021, 1:22 PM IST

ಕೊಪ್ಪಳ:ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದ ಹಿನ್ನೆಲೆ ತರಬೇತಿ ಹಂತದಲ್ಲಿರುವ ಕೊಪ್ಪಳ ವಿಭಾಗೀಯ ಕೊಪ್ಪಳ ಹಾಗೂ ಗಂಗಾವತಿ ಘಟಕಗಳ ತರಬೇತಿ ಹಂತದ ಐವರು ಸಿಬ್ಬಂದಿಗಳು ತಕ್ಷಣ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ನೇಮಕಾತಿ ಪಟ್ಟಿಯಿಂದ ಕೈಬಿಡುವುದಾಗಿ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ. ಮುಲ್ಲಾ ಸೂಚನೆ ನೀಡಿದ್ದಾರೆ.

ಈ ಕುರಿತಂತೆ ಸೂಚನಾ ಪತ್ರ ಹೊರಡಿಸಿರುವ ಅವರು, ಕೊಪ್ಪಳ ಘಟಕದ ತರಬೇತಿ ಹಂತದ ಶರಣಪ್ಪ ವಿರುಪಾಕ್ಷಪ್ಪ ಪಟ್ಟಣಶೆಟ್ರು, ಬಸವರಾಜ ಪಿಡ್ಡಪ್ಪ ಹಳ್ಳದ, ಸಕ್ರಪ್ಪ ಲಮಾಣಿ ಹಾಗೂ ಗಂಗಾವತಿ ಘಟಕದ ಮಹಾಂತಪ್ಪ ಬಾಲಪ್ಪ ಚಳಗೇರಿ, ಹನುಮಂತ್ರಾಯ ನಾಯಕ ಮಹದೇವಪ್ಪ ಎಂಬ ಸಿಬ್ಬಂದಿಗೆ ಕರೆ ನೋಟಿಸ್ ನೀಡಿದ್ದಾರೆ. ಷರತ್ತು ಮತ್ತು ನಿಬಂಧನೆಗಳನ್ನು ಒಳಪಟ್ಟು ಕರ್ತವ್ಯದ ಮೇಲೆ ತರಬೇತಿಯಲ್ಲಿ ನಿಯೋಜನೆಗೊಂಡಿದ್ದೀರಿ.

ತರಬೇತಿ ಹಂತದ ನೌಕರರಿಗೆ ಖಡಕ್​ ನೋಟಿಸ್

ಸಾರಿಗೆ ಸಂಸ್ಥೆಗಳು ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಗಳು ಎಂದು ಘೋಷಣೆ ಮಾಡಿದೆ. ಈಗ ಷರತ್ತು ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಅನಧಿಕೃತವಾಗಿ ಕರ್ತವ್ಯ, ತರಬೇತಿಗೆ ಗೈರಾಗಿದ್ದೀರಿ. ಹೀಗಾಗಿ, ತಕ್ಷಣಕ್ಕೆ ಕರ್ತವ್ಯದ ತರಬೇತಿಗೆ ಹಾಜರಾಗಬೇಕು. ಇಲ್ಲವಾದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಹುದ್ದೆಯ ಆಯ್ಕೆಪಟ್ಟಿಯಿಂದ ಕೈಬಿಡಲಾಗುವುದು ಎಂದು ವಿಭಾಗೀಯ ನಿಯಂತ್ರಕರು ಕರೆ ನೋಟಿಸ್​ನಲ್ಲಿ ಸೂಚಿಸಿದ್ದಾರೆ.

ABOUT THE AUTHOR

...view details