ಕೊಪ್ಪಳ: ಗಣೇಶ ಮೂರ್ತಿ ನಿಮಜ್ಜನದ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಕೆಗೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಕೊನೆಗೆ ನಿಮಜ್ಜನವನ್ನೇ ಸಂಘಟಕರು ಮುಂದೂಡಿದ್ದಾರೆ.
ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಸಿಗದ ಅನುಮತಿ: ಗಣೇಶ ನಿಮಜ್ಜನವೇ ಮುಂದೂಡಿಕೆ
ಕೊಪ್ಪಳದಲ್ಲಿ ಪ್ರತಿಷ್ಠಾಪಿಸಲಾಗಿದ್ದ 'ಕೊಪ್ಪಳ್ ಕಾ ರಾಜಾ' ಗಣೇಶಮೂರ್ತಿ ನಿಮಜ್ಜನ ಮಾಡಲು ಸಂಘಟಕರು ಕಳೆದ ದಿನ ನಿರ್ಧರಿಸಿದ್ದರು. ಆದರೆ ಈ ಸಂದರ್ಭದಲ್ಲಿ ಡಿಜೆ ಬಳಕೆಗೆ ಜಿಲ್ಲಾಡಳಿತ ಅನುಮತಿ ನೀಡಲಿಲ್ಲ. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ನಡೆಯಬೇಕಿದ್ದ ನಿಮಜ್ಜನ ಮೆರವಣಿಗೆಯನ್ನು ಸಂಘಟಕರು ಸೋಮವಾರಕ್ಕೆ ಮುಂದೂಡಿದ್ದಾರೆ.
ಗಣೇಶ ನಿಮಜ್ಜನವನ್ನೇ ಮುಂದೂಡಿದ ಸಂಘಟಕರು
ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ 'ಕೊಪ್ಪಳ್ ಕಾ ರಾಜಾ' ಗಣೇಶಮೂರ್ತಿ ನಿಮಜ್ಜನ ಮಾಡಲು ಸಂಘಟಕರು ಶನಿವಾರ ನಿರ್ಧರಿಸಿದ್ದರು. ಆದರೆ ಈ ಸಂದರ್ಭದಲ್ಲಿ ಡಿಜೆ ಬಳಕೆಗೆ ಜಿಲ್ಲಾಡಳಿತ ಅನುಮತಿ ನೀಡಲಿಲ್ಲ. ಡಿಜೆ ಬಳಸದಂತೆ ಸಂಘಟಕರಿಗೆ ಸೂಚನೆ ನೀಡಿತ್ತು.
ಡಿಜೆಗೆ ಅನುಮತಿ ನೀಡುವಂತೆ ಸಂಘಟಕರು ಜಿಲ್ಲಾಡಳಿತ, ಪೊಲೀಸರಿಗೆ ಮನವಿ ಮಾಡಿದರು. ಆದರೆ ಈ ಮನವಿಯನ್ನು ಜಿಲ್ಲಾಡಳಿತ ತಿರಸ್ಕಾರ ಮಾಡಿತ್ತು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ನಡೆಯಬೇಕಿದ್ದ ನಿಮಜ್ಜನ ಮೆರವಣಿಗೆಯನ್ನು ಸಂಘಟಕರು ಸೋಮವಾರಕ್ಕೆ ಮುಂದೂಡಿದ್ದಾರೆ.