ಕರ್ನಾಟಕ

karnataka

ETV Bharat / state

ಕೋವಿಡ್ ಆತಂಕ : ಕೊಪ್ಪಳದ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧ - ದೇವಸ್ಥಾನ ಪ್ರವೇಶ ನಿಷೇಧ

ಕೋವಿಡ್ ಮುನ್ನಚ್ಚರಿಕಾ ಕ್ರಮವಾಗಿ ಕೊಪ್ಪಳದ ಪ್ರಸಿದ್ದ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

Koppal Huligemma Devi temple
ದೇವಸ್ಥಾನ ಪ್ರವೇಶ ನಿಷೇಧ

By

Published : Jul 31, 2021, 8:44 AM IST

ಕೊಪ್ಪಳ : ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಕೊಪ್ಪಳ ತಾಲೂಕು ಹುಲಗಿಯ ಪ್ರಸಿದ್ದ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಇಂದಿನಿಂದ ಆಗಸ್ಟ್ 14 ರವರೆಗೆ ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಜುಲೈ 31 (ಇಂದಿನಿಂದ) ಆಗಸ್ಟ್ 14 ರವರೆಗೆ 15 ದಿನಗಳ ಕಾಲ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಭಕ್ತರ ದರ್ಶನ ನಿರ್ಬಂಧಿಸಿ ಕೊಪ್ಪಳ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಆದೇಶ ಹೊರಡಿಸಿದ್ದಾರೆ.

ಓದಿ : COVID 3ನೇ ಅಲೆ ತಡೆಯಲು ಪಾಲಿಕೆಯಿಂದ ಮನೆ ಮನೆ ಕೋವಿಡ್ ಪರೀಕ್ಷೆ

ಆಷಾಡ ಮಾಸದ ಕೊನೆಯಲ್ಲಿ ಹಾಗೂ ಶ್ರಾವಣ ಮಾಸದ ಅರಂಭದಲ್ಲಿ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗಾಗಿ, ಸೋಂಕು ಹರಡುವ ಭೀತಿ ಇರುವುದರಿಂದ ದೇವಸ್ಥಾನಕ್ಕೆ ಭಕ್ತರು ಬರುವುದನ್ನು ನಿಷೇಧಿಸಲಾಗಿದೆ.

ಹುಲಿಗೆಮ್ಮದೇವಿ ದೇವಸ್ಥಾನ ಹಾಗೂ ಮುನಿರಾಬಾದ್ ರೈಲ್ವೆ ನಿಲ್ದಾಣದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ಉಪವಿಭಾಗಾಧಿಕಾರಿ ಆದೇಶಿಸಿದ್ದಾರೆ. ದೇವರ ದರ್ಶನಕ್ಕೆ ಅವಕಾಶವಿಲ್ಲದಿರುವುದು ಭಕ್ತರಲ್ಲಿ ನಿರಾಸೆ ಮೂಡಿಸಿದೆ.

ABOUT THE AUTHOR

...view details