ಕೊಪ್ಪಳ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆಯ ಛಾವಣಿ ಕುಸಿತಗೊಂಡಿದ್ದು, ಪವಾಡ ಸದೃಶ್ಯವಾಗಿ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಮನೆಯ ಛಾವಣಿ ಕುಸಿತ: ಅದೃಷ್ಟವಶಾತ್ ಮಗು ಅಪಾಯದಿಂದ ಪಾರು
ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ತಿರಣೆಪ್ಪ ಓಲಿ ಎಂಬುವವರ ಮನೆಯ ಹಿಂಭಾಗದ ಛಾವಣಿ ಕುಸಿತಗೊಂಡಿದೆ. ಅದೃಷ್ಠವಶಾತ್ ಹಿಂಭಾಗದ ಕೋಣೆಗೆ ಹೋಗಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಸಂಜೆಯ ವೇಳೆ, ಈ ಘಟನೆ ನಡೆದಿದೆ. ನಿನ್ನೆ ಸಂಜೆ ಸುಮಾರು 6 ಗಂಟೆಯ ವೇಳೆಗೆ ಮುಧೋಳ ಗ್ರಾಮದ ತಿರಣೆಪ್ಪ ಓಲಿ ಎಂಬುವವರ ಮನೆಯ ಹಿಂಭಾಗದ ಛಾವಣಿ ಕುಸಿತಗೊಂಡಿದೆ. ಮನೆಯ ಮುಂಭಾಗದ ಕೋಣೆಯಲ್ಲಿ ಸುಮಾರು ನಾಲ್ಕು ಜನ ಇದ್ದರು. ಏನೋ ತರಲು ಎಂದು 5 ವರ್ಷದ ಮಗು ಮನೆಯ ಹಿಂಭಾಗದ ಕೋಣೆಗೆ ಹೋಗಿದೆ. ಆಗ ಏಕಾಏಕಿ ಮನೆಯ ಛಾವಣಿ ಕುಸಿದಿದೆ. ಅದೃಷ್ಠವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಛಾವಣಿ ಕುಸಿತದಿಂದ ಮನೆಯೊಳಗೆ ಮಗು ಸಿಲುಕಿದ್ದು, ಮನೆಯವರು ಕೂಗಿಕೊಂಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತದ ಸ್ಥಳೀಯರು ಮಗುವನ್ನು ಸುರಕ್ಷಿತವಾಗಿ ಹೊರಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.