ಕೊಪ್ಪಳ: ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಗಾಳಿಸಹಿತ ಆಲಿಕಲ್ಲು ಮಳೆಯಾಗಿದೆ. ಆಗಸದಿಂದ ಧರೆಗುರುಳಿದ ಭಾರಿ ಗಾತ್ರದ ಆಲಿಕಲ್ಲುಗಳನ್ನು ಕಂಡ ಜನರು ಅರೆಕ್ಷಣ ಮೂಕವಿಸ್ಮಿತರಾದರು.
ಕೊಪ್ಪಳ: ದೊಡ್ಡ ಗಾತ್ರದ ಆಲಿಕಲ್ಲು ಕಂಡು ಗ್ರಾಮಸ್ಥರಿಗೆ ಅಚ್ಚರಿ - ಕೊಪ್ಪಳ ಆಲಿಕಲ್ಲು ಮಳೆ
ಯಲಬುರ್ಗಾ ತಾಲೂಕಿನ ಮದ್ಲೂರು ಬಳಿ ನಿನ್ನೆ ಸಂಜೆ ಆಲಿಕಲ್ಲುಸಹಿತ ಮಳೆಯಾಗಿದ್ದು, ಬೃಹತ್ ಗಾತ್ರದ ಆಲಿಕಲ್ಲು ಕಂಡು ಗ್ರಾಮಸ್ಥರು ಅಚ್ಚರಿಗೊಳಗಾದರು.
ಕೊಪ್ಪಳದಲ್ಲಿ ಆಲಿಕಲ್ಲು ಮಳೆ
ಯಲಬುರ್ಗಾ ತಾಲೂಕಿನ ಮದ್ಲೂರು ಬಳಿ ನಿನ್ನೆ ಸಂಜೆ ಭಾರಿ ಪ್ರಮಾಣದ ಆಲಿಕಲ್ಲು ಮಳೆ ಸುರಿಯಿತು. ಸೀಡ್ಸ್ ಪ್ಲಾಟ್ ಮೆಸ್ ಮೇಲೆ ಆಲಿಕಲ್ಲುಗಳು ಬಿದ್ದಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಆಲಿಕಲ್ಲುಗಳನ್ನು ಗ್ರಾಮಸ್ಥರು ಕುತೂಹಲದಿಂದ ಸಂಗ್ರಹಿಸುತ್ತಿದ್ದ ದೃಶ್ಯ ಕಂಡುಬಂತು.