ಕೊಪ್ಪಳ:ಅಂಗಡಿ ಮಾಲೀಕನೋರ್ವ ಐದು ವರ್ಷದ ಬಾಲಕಿಯನ್ನು ದುಡ್ಡು ಕದ್ದಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ಕಟ್ಟಿಹಾಕಿ ಥಳಿಸಿರುವ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ.
ದುಡ್ಡು ಕದ್ದ ಆರೋಪ... ಬಾಲಕಿಯನ್ನು ಥಳಿಸಿ, ಕಟ್ಟಿಹಾಕಿದ ಅಂಗಡಿ ಮಾಲೀಕ
ಅಂಗಡಿಯಲ್ಲಿ ಬಾಲಕಿ 50 ರೂಪಾಯಿ ಕದ್ದಿದ್ದಾಳೆ ಎಂದು ಆರೋಪಿಸಿ 5 ವರ್ಷದ ಬಾಲಕಿಯನ್ನು ಅಂಗಡಿ ಮಾಲೀಕನೋರ್ವ ಥಳಿಸಿರುವ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ.
ಮಾಲೀಕ
ಯಲಬುರ್ಗಾದ ಪ್ರಶಾಂತ್ ನಗರದಲ್ಲಿ ಈ ಪ್ರಕರಣ ನಡೆದಿದೆ. ಮೋದಿನ್ ಸಾಬ್ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದೆ. ಅಂಗಡಿಯಲ್ಲಿ ಬಾಲಕಿ 50 ರೂಪಾಯಿ ಕದ್ದಿದ್ದಾಳೆ ಎಂದು ಆರೋಪಿಸಿ ಬಾಲಕಿಯನ್ನು ಅಂಗಡಿ ಮಾಲೀಕ ಮೋದಿನ್ ಸಾಬ್ ಕಟ್ಟಿಹಾಕಿ ಥಳಿಸಿದ್ದಾನೆ.
ಅಲ್ಲದೆ ನೆತ್ತಿ ಸುಡುವ ಬಿಸಿಲಿನಲ್ಲಿ ಸುಮಾರು 2 ಗಂಟೆಗೂ ಅಧಿಕ ಕಾಲ ಬಾಲಕಿಯನ್ನು ಕಟ್ಟಿಹಾಕಿ ಅಮಾನವೀಯತೆ ಮೆರೆದಿದ್ದಾನೆ. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಮೋದಿನ್ವಿಚಾರಣೆನಡೆಸಿದ್ದಾರೆ.