ಕರ್ನಾಟಕ

karnataka

ಇದ್ದರೂ ಇಲ್ಲದಂತಾಗಿದೆ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ

ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಲಕ್ಷಾಂತರ ರೂಪಾಯಿ ಮೂಲ್ಯದ ಶುದ್ಧ ಕುಡಿಯುವ ನೀರಿನ ಘಟಕ ನಿಷ್ಪ್ರಯೋಜಕವಾಗಿದೆ.

By

Published : Nov 23, 2019, 11:36 AM IST

Published : Nov 23, 2019, 11:36 AM IST

Updated : Nov 23, 2019, 12:42 PM IST

ಇದ್ದರೂ ಇಲ್ಲದಂತಾಗಿದೆ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ

ಕೊಪ್ಪಳ:ಪ್ರಯಾಣಿಕರಿಗೆ ಅನೂಕೂಲಕ್ಕಾಗಿ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ‌. ಆದರೆ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಯೋಜನೆ ಮೂಲೆಗುಂಪಾಗಿದೆ.

ಇದ್ದರೂ ಇಲ್ಲದಂತಾಗಿದೆ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ

ಹೌದು, ಸೌಲಭ್ಯಗಳೇ ಇಲ್ಲ ಎಂಬ ಕೊರತೆ ಕಹಲವೆಡೆಯಾದರೆ, ಹೀಗೆ ಕೈಗೆ ಬಂದರೂ ಬಾಯಿಗೆ ಬರದಂತಾಗಿರುವುದು ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದ ಶುದ್ಧ ಕುಡಿಯುವ ನೀರಿನ ಘಟಕದ ಸ್ಥಿತಿಯಾಗಿದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದು, ಪ್ರಯಾಣಿಕರು ಕೇವಲ 2 ರೂಪಾಯಿ ನಾಣ್ಯ ಹಾಕಿ ಒಂದು ಬಾಟಲ್​ ನೀರು ಪಡೆಯಬಹುದಿತ್ತು. ಆದರೆ, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಳವಡಿಸಲಾಗಿರುವ ಈ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆ ನಿಷ್ಪ್ರಯೋಜಕವಾಗಿ ಬಹುಕಾಲವೇ ಆಗಿದೆ. ನೀರಿಗಾಗಿ ಬಾಟಲ್​ ಹಿಡಿದು ಹೋದವರು ಘಟಕದಿಂದ ಹನಿ ನೀರೂ ಸಿಗದೆ ಕೊನೆಗೆ ಅಂಗಡಿಯಿಂದಲೇ ದುಬಾರಿ ಬಾಟಲ್​ ನೀರನ್ನು ಕೊಳ್ಳವಂತಾಗಿದೆ.

ಈ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿರುವುದರಿಂದ ನೀರು ಶುದ್ಧೀಕರಣ ಯಂತ್ರಗಳು ಧೂಳು ತಿನ್ನುತ್ತಿವೆ. ಆದರೆ, ಸಾರಿಗೆ ಸಂಸ್ಥೆಯ ಅಧಿಕಾರಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹಣ ಇದ್ದ ಪ್ರಯಾಣಿಕರು ಹೆಚ್ಚಿನ ದುಡ್ಡು ಕೊಟ್ಟು ನೀರು ತೆಗೆದುಕೊಳ್ತಾರೆ. ಆದರೆ, ಸಾಮಾನ್ಯ ಪ್ರಯಾಣಿಕರು ದಾಹದಿಂದಲೇ ತಮ್ಮ ಊರಿಗೆ ಹೋಗಬೇಕಿದೆ. ಅಲ್ಲಿನ ಅಂಗಡಿ ಮಾಲೀಕರ ಲಾಬಿಗೆ ಮಣಿದು ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Last Updated : Nov 23, 2019, 12:42 PM IST

ABOUT THE AUTHOR

...view details