ಕರ್ನಾಟಕ

karnataka

ETV Bharat / state

ಕ್ಷಯರೋಗ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾದ ಕೊಪ್ಪಳ ಜಿಲ್ಲೆ - ಕ್ಷಯರೋಗ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾದ ಕೊಪ್ಪಳ ಜಿಲ್ಲೆ

ಅಂತಾರಾಷ್ಟ್ರೀಯ ಹಾಗೂ ವಿಶ್ವ ದರ್ಜೆಯ ವೆಬ್​ಸೈಟ್​​ನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕ್ಷಯ ರೋಗ ನಿಯಂತ್ರಣಕ್ಕೆ ಕೈಗೊಂಡ ಮಾದರಿ ಕಾರ್ಯ ಫ್ಲೋಟ್ ಆಗಿ ಸಾರ್ವಜನಿಕರ ಗಮನ ಸೆಳೆದಿದೆ ಎಂದು ಉಪ ವಿಭಾಗೀಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಈಶ್ವರ ಸವಡಿ ಹೇಳಿದರು.

Koppal district is a model for tuberculosis control
ಕ್ಷಯರೋಗ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾದ ಕೊಪ್ಪಳ ಜಿಲ್ಲೆ

By

Published : Mar 23, 2021, 7:40 AM IST

ಗಂಗಾವತಿ:ಕ್ಷಯ ರೋಗ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇಂದು ಇಡೀ ದೇಶಕ್ಕೆ ಕೊಪ್ಪಳ ಜಿಲ್ಲೆ ರೋಲ್ ಮಾಡೆಲ್ ಆಗಿದೆ ಎಂದು ಇಲ್ಲಿನ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಈಶ್ವರ ಸವಡಿ ಹೇಳಿದರು.

ಕ್ಷಯರೋಗ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾದ ಕೊಪ್ಪಳ ಜಿಲ್ಲೆ

ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಾಧನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಹಾಗೂ ವಿಶ್ವ ದರ್ಜೆಯ ವೆಬ್​ಸೈಟ್​​ನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕ್ಷಯ ರೋಗ ನಿಯಂತ್ರಣಕ್ಕೆ ಕೈಗೊಂಡ ಮಾದರಿ ಕಾರ್ಯ ಫ್ಲೋಟ್ ಆಗಿ ಸಾರ್ವಜನಿಕರ ಗಮನ ಸೆಳೆದಿದೆ. ಇದೀಗ ಕ್ಷಯ ರೋಗ ನಿಯಂತ್ರಣಕ್ಕೆ ಇಡೀ ದೇಶದಲ್ಲಿ ಕೊಪ್ಪಳ ಬೆಸ್ಟ್ ಮಾಡೆಲ್ ಎಂದು ಹೇಳಲಾಗುತ್ತಿದೆ. ಕ್ಷಯ ರೋಗ ನಿಯಂತ್ರಕ್ಕೆ ಕೇವಲ ಅಧಿಕಾರಿಗಳು ಮಾತ್ರವಲ್ಲ, ಸಾರ್ವಜನಿಕರ ಸ್ಪಂದನೆಯೂ ಮುಖ್ಯವಾಗಿರುತ್ತದೆ ಎಂದರು.

ಓದಿ : ಯತ್ನಾಳ್​ ವಿರುದ್ಧ ಕ್ರಮಕ್ಕೆ ಬಿಜೆಪಿ ಶಾಸಕರ ಆಗ್ರಹ... ಮುಖ್ಯಮಂತ್ರಿ ಭೇಟಿ ಮಾಡಿ ದೂರು

24 ರಂದು ವಿಶ್ವಕ್ಷಯ ದಿನಾಚರಣೆ ನಿಮಿತ್ತ ಪ್ರಚಾರದ ಸಾಮಾಗ್ರಿಗಳನ್ನ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ವೈದ್ಯ ಸತೀಶ್ ರಾಯ್ಕರ್, ಬಿಇಒ ಸೋಮಶೇಖರಗೌಡ ಇದ್ದರು.

ABOUT THE AUTHOR

...view details