ಕರ್ನಾಟಕ

karnataka

ETV Bharat / state

ಬಿಜೆಪಿ ಸಂಸದರು ಈ ಮಟ್ಟದವರು ... ನಾಲಿಗೆ ಹರಿಬಿಟ್ಟಿ ಶಿವರಾಜ್ ತಂಗಡಗಿ - bjp mp's

ರಾಜ್ಯದ ಬಿಜೆಪಿ ಸಂಸದರು ನರಸತ್ತವರು ಎಂದು ಹೇಳುವ ಮೂಲಕ ಮಾಜಿ ಸಚಿವ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ನಾಲಿಗೆ ಹರಿಬಿಟ್ಟಿದ್ದಾರೆ.

ರಾಜ್ಯದ ಬಿಜೆಪಿ ಸಂಸದರು ನರಸತ್ತ ನಾಮರ್ಧರು...ನಾಲಿಗೆ ಹರಿಬಿಟ್ಟಿ ಶಿವರಾಜ್ ತಂಗಡಗಿ

By

Published : Oct 3, 2019, 6:51 AM IST


ಕೊಪ್ಪಳ:ರಾಜ್ಯದ ಬಿಜೆಪಿ ಸಂಸದರು ನರಸತ್ತ ನಾಮರ್ಧರು ಎಂದು ಹೇಳುವ ಮೂಲಕ ಮಾಜಿ ಸಚಿವ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ನಾಲಿಗೆ ಹರಿಬಿಟ್ಟಿದ್ದಾರೆ.

ರಾಜ್ಯದ ಬಿಜೆಪಿ ಸಂಸದರು ನರಸತ್ತ ನಾಮರ್ಧರು...ನಾಲಿಗೆ ಹರಿಬಿಟ್ಟಿ ಶಿವರಾಜ್ ತಂಗಡಗಿ

ಮಹಾತ್ಮಗಾಂಧಿ ಜಯಂತಿ ನಿಮಿತ್ತ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಮುಕ್ತಾಯದ ಬಳಿಕ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಪರಿಣಾಮ ಜನರು ಸಂಕಷ್ಟ ಅನುಭವಿಸಿದ್ದಾರೆ. ಅವರಿಗೆ ಈವರೆಗೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಒಂದು ಪ್ರತಿಕ್ರಿಯೆ ಸಹ ಕೊಟ್ಟಿಲ್ಲ. ಕೇಂದ್ರದಿಂದ ಈವರೆಗೂ ಪರಿಹಾರ ಬಂದಿಲ್ಲ. ಇಷ್ಟಾದರೂ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ 24 ಸಂಸದರು ಪ್ರಧಾನಿ ಬಳಿ ಹೋಗಿ ಪರಿಹಾರ ನೀಡಿ ಎಂದು ಕೇಳಿಲ್ಲ. ಮೋದಿ ಬಳಿ ಹೋಗಿ ಕೇಳುವ ತಾಕತ್ತು ಅವರಿಗೆ ಇಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ನರಸತ್ತವರು ಎಂದು ಶಿವರಾಜ ತಂಗಡಗಿ ಜರಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕೇಂದ್ರದಿಂದ ಪರಿಹಾರ ಕೇಳದ ಬಿಜೆಪಿ ಸಂಸದರಿಗೆ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೀರೆ, ಬಳೆ, ಅರಿಶಿನ, ಕುಂಕುಮ ಕಳಿಸಲಾಗುತ್ತದೆ. ಇದೇ ಅಕ್ಟೋಬರ್ 15ರೊಳಗೆ ರಾಜ್ಯದ ಬಿಜೆಪಿ ಸಂಸದರು ಕೇಂದ್ರದಿಂದ ಅನುದಾನ ತರಬೇಕು. ಇಲ್ಲವಾದಲ್ಲಿ 15ರ ನಂತರ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಕಳಿಸುವ ಸೀರೆ, ಬಳೆ ತೊಟ್ಟುಕೊಂಡು ಪ್ರಧಾನಿ ಮುಂದೆ ನಿಲ್ಲಬೇಕು. ಆಗಲಾದರೂ ಪ್ರಧಾನಿಗೆ ಗೊತ್ತಾಗಲಿ. ಇಲ್ಲವೆ ನಾವು ಕಳಿಸುವ ಸೀರೆಯನ್ನು ಉಟ್ಟುಕೊಂಡ ಮೇಲಾದರೂ ಪ್ರಧಾನಿಯನ್ನು ಅನುದಾನ ಕೇಳುವ ಧೈರ್ಯ ಅವರಿಗೆ ಬರಲಿ ಎಂದಿದ್ದಾರೆ.

ABOUT THE AUTHOR

...view details