ಕೊಪ್ಪಳ:ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರು ಬೆಡ್ಗಾಗಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಬೆಡ್ಗಳ ಲಭ್ಯತೆಯ ಬಗ್ಗೆ ಕೊಪ್ಪಳ ಜಿಲ್ಲಾಡಳಿತ ವೆಬ್ಸೈಟ್ ಆರಂಭಿಸಿದೆ.
ಬೆಂಗಳೂರು ಮಾದರಿಯಲ್ಲಿ ಕೊಪ್ಪಳದಲ್ಲಿಯೂ ವೆಬ್ಸೈಟ್ ಆರಂಭಿಸಲಾಗಿದೆ. ಬೆಡ್ಗಳ ಲಭ್ಯತೆಯ ಕುರಿತಂತೆ https://Koppal.nic.in/end/covid-19 ವಿಳಾಸದಲ್ಲಿ ವೀಕ್ಷಿಸಬಹುದು. ಜಿಲ್ಲೆಯಲ್ಲಿ 6 ಸರ್ಕಾರಿ ಆಸ್ಪತ್ರೆಗಳು, 10 ಖಾಸಗಿ ಆಸ್ಪತ್ರೆಗಳು, ನಾಲ್ಕು ಕೊವಿಡ್ ಕೇರ್ ಸೆಂಟರ್ನಲ್ಲಿನ ಬೆಡ್ಗಳ ಮಾಹಿತಿ, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಎಲ್ಲಾ ಮಾಹಿತಿ ಈ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ. ಸದ್ಯ ಕುಷ್ಟಗಿ ಹಾಗೂ ಯಲಬುರ್ಗಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 8 ಬೆಡ್ಗಳು ಲಭ್ಯವಿದೆ.