ಕರ್ನಾಟಕ

karnataka

ETV Bharat / state

ಐತಿಹಾಸಿಕ ಆನೆಗೊಂದಿ ಉತ್ಸವ-20.. ಸ್ಮಾರಕ ಸ್ವಚ್ಛತೆಗೆ ಜಿಲ್ಲಾಡಳಿತ ಯೋಜನೆ.. - ಗಂಗಾವತಿ ಆನೆಗೊಂದಿ ಉತ್ಸವ ಕಾರ್ಯಕ್ರಮ ಸುದ್ದಿ

ಆನೆಗೊಂದಿಯಲ್ಲಿ ಜನವರಿ 9 ಮತ್ತು 10ರಂದು ನಡೆಯುವ ಎರಡು ದಿನಗಳ ಆನೆಗೊಂದಿ ಉತ್ಸವ-20ಕ್ಕೆ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಸೋಮವಾರದಿಂದ 450 ಜನರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.

Anegondi utsava
ಆನೆಗೊಂದಿ ಉತ್ಸವ

By

Published : Dec 21, 2019, 10:04 PM IST

ಗಂಗಾವತಿ : ತಾಲೂಕಿನ ಆನೆಗೊಂದಿಯಲ್ಲಿ ಜನವರಿ 9 ಮತ್ತು 10ರಂದು ನಡೆಯಲಿರುವ ಎರಡು ದಿನಗಳ ಆನೆಗೊಂದಿ ಉತ್ಸವ-20ಕ್ಕೆ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಸೋಮವಾರದಿಂದ 450 ಜನರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಯೋಜನೆ ರೂಪಿಸಿದೆ.

ಸಂಕಲ್ಪ ಪಿಯು ಕಾಲೇಜಿನ 100 ಮಕ್ಕಳು, ಎನ್​ಸಿಸಿಯ ಐವತ್ತು ಮಕ್ಕಳು, ಗ್ರಾಮೀಣಾಭೀವೃದ್ಧಿ ಪಂಚಾಯತ್ ಇಲಾಖೆಯ 100 ಅಧಿಕಾರಿಗಳು, ಇತರೆ ಸಂಘ ಸಂಸ್ಥೆಗಳಿಂದ 50 ಹಾಗೂ 100 ಜನ ಕೂಲಿ ಕೆಲಸಗಾರರನ್ನು ಬಳಸಿಕೊಳ್ಳಲು ಚಿಂತನೆ ನಡೆಸಿದೆ.

ಐತಿಹಾಸಿಕ ಆನೆಗೊಂದಿ ಉತ್ಸವ-20ಕ್ಕೆ ತಯಾರಿ ಜೋರು..

ಕಡೇಬಾಗಿಲು,ಸಣ್ಣಕಲ್ಲುಬಾಗಿಲು, ಆಂಜನೇಯ ದೇವಸ್ಥಾನ, ಮಲ್ಲಮ್ಮ, ವೀರಭದ್ರೇಶ್ವರ ದೇವಸ್ಥಾನ, ನಾಗಮ್ಮ ದೇಗುಲ, ತಳವಾರ ಘಟ್ಟ ಮಂಟಪ, ಕೃಷ್ಣದೇವರಾಯ ಪುತ್ಥಳಿ, ಚಿಂತಾಮಣಿ, ಹುಚ್ಚಪ್ಪಯ್ಯನ ಮಠ, ದುರ್ಗಾ ದೇವಸ್ಥಾನ, ಸುತ್ತಲಿನ ಕೋಟೆ ಮೊದಲಾದ ಸ್ಥಳಗಳ ಸ್ವಚ್ಛತೆಗೆ ನೀಲ ನಕಾಶೆ ರೂಪಿಸಲಾಗಿದೆ.

ಪ್ರತ್ಯೇಕ ತಂಡ ರಚಿಸಿ, ಇಂತಿಷ್ಟು ಜನರಿಗೆ ಒಂದು ಗುಂಪುಗಳನ್ನು ಮಾಡಲಾಗಿದೆ. ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸ್ವಚ್ಛತಾ ಕಾರ್ಯದ ಪ್ರತಿ ಗುಂಪಿಗೂ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ.

ABOUT THE AUTHOR

...view details