ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಚುನಾವಣೆ ದಿನ ಜಾತ್ರೆ, ಸಂತೆ ಮಾಡುವಂತಿಲ್ಲ: ಡಿಸಿ ಆದೇಶ

ಗ್ರಾಮ ಕದನದ ಕಾವು ದಿನೇ ದಿನೆ ಹೆಚ್ಚಾಗುತ್ತಿದೆ. ಕೊಪ್ಪಳದಲ್ಲೂ ಕಾವು ಜೋರಾಗಿದ್ದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ನಡೆಯುವ ತಾಲೂಕುಗಳಲ್ಲಿ ಆ ದಿನ ಯಾವುದೇ ಜಾತ್ರೆ, ಸಂತೆಗಳನ್ನು ಮಾಡಬಾರದಾಗಿ ಜಿಲ್ಲಾಧಿಕಾರಿ ಆದೇಶ ನೀಡಿದ್ಧಾರೆ.

Koppal DC
ವಿಕಾಸ್ ಕಿಶೋರ್ ಸುರಾಳ್ಕರ್

By

Published : Dec 19, 2020, 5:10 PM IST

ಕೊಪ್ಪಳ:ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಚುನಾವಣೆ ನಡೆಯುವ ದಿನಗಳಂದು ಜಾತ್ರೆ ಹಾಗೂ ಸಂತೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತ್​ಗಳಿಗೆ ಚುನಾವಣೆ ನಡೆಯಲಿದೆ.‌ ಮೊದಲ ಹಂತದ ಚುನಾವಣೆ ಡಿಸೆಂಬರ್ 22 ರಂದು ಹಾಗೂ ಎರಡನೇ ಹಂತದ ಚುನಾವಣೆ ಡಿಸೆಂಬರ್ 27 ರಂದು ನಡೆಯಲಿದೆ.‌ ಡಿಸೆಂಬರ್‌ 22 ರಂದು ಮೊದಲ ಹಂತದ ಚುನಾವಣೆ ನಡೆಯಲಿರುವ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಅಂದು ನಡೆಯಬೇಕಿದ್ದ ಜಾತ್ರೆ ಹಾಗೂ ಸಂತೆಗಳನ್ನು ನಿಷೇಧಿಸಲಾಗಿದೆ.

ಓದಿ:ಕೊಪ್ಪಳ: ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಗ್ರಾಹಕಸ್ನೇಹಿಯಾದ ಅಂಚೆ ಇಲಾಖೆ

ಡಿಸೆಂಬರ್ 27 ರಂದು ಎರಡನೇ ಹಂತದ ಚುನಾವಣೆ ನಡೆಯಲಿರುವ ಗಂಗಾವತಿ, ಕುಷ್ಟಗಿ, ಕಾರಟಗಿ ಹಾಗೂ ಕನಕಗಿರಿ ತಾಲೂಕಿನಲ್ಲಿ ಆ ದಿನ ನಡೆಯಬೇಕಿದ್ದ ಜಾತ್ರೆ ಹಾಗೂ ಸಂತೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details