ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದವರಿಗೆ ಈಗ ದಂಡ ಹಾಕಲಾಗುತ್ತಿದೆ.
ಕೊರೊನಾ ಜಾಗೃತಿಗೆ ತಾವೇ ಫೀಲ್ಡಿಗಿಳಿದ ಡಿಸಿ; ಮಾಸ್ಕ್ ಹಾಕದವರಿಗೆ ದಂಡ - ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್
ಕೊಪ್ಪಳ ನಗರದ ವಿವಿಧ ಪ್ರದೇಶಗಳಿಗೆ ಇಂದು ಸ್ವತಃ ಜಿಲ್ಲಾಧಿಕಾರಿಯವರೇ ಭೇಟಿ ನೀಡಿ ಮಾಸ್ಕ್ ಹಾಕದವರಿಗೆ ದಂಡ ಹಾಕುವ ಕಾರ್ಯ ಮಾಡಿದ್ದಾರೆ.
ನಗರದಲ್ಲಿ ಇಂದು ಸ್ವತಃ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಫೀಲ್ಡಿಗಿಳಿದಿದ್ದರು. ನಗರದ ಅಶೋಕ ಸರ್ಕಲ್, ಜವಾಹರ ರಸ್ತೆ, ಜೆಪಿ ಮಾರ್ಕೆಟ್ ಪ್ರದೇಶ ಸೇರಿದಂತೆ ನಗರದ ವಿವಿಧ ಪ್ರದೇಶಗಳದಲ್ಲಿ ಅಧಿಕಾರಿಗಳೊಂದಿಗೆ ತೆರಳಿ ಮಾಸ್ಕ್ ಹಾಕದೆ ಓಡಾಡುತ್ತಿದ್ದ ವಾಹನ ಸವಾರರಿಗೆ, ಸಾರ್ವಜನಿಕರಿಗೆ ದಂಡ ವಿಧಿಸಿದರು.
ಮಾಸ್ಕ್ ಹಾಕದೆ ಇದ್ದ ಜನರಿಗೆ ಕೊರೊನಾ ಕುರಿತಂತೆ ಹಾಗೂ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ಇನ್ನು ಈ ಸಂದರ್ಭದಲ್ಲಿ ದಂಡ ಪಾವತಿಸಲು ಹಣವಿಲ್ಲ ಎಂದು ಹೇಳಿದ ವ್ಯಕ್ತಿಯನ್ನು ಕ್ವಾರಂಟೈನ್ಗೆ ಕಳಿಸಿ, ಕೇಸ್ ದಾಖಲಿಸುವಂತೆ ಡಿಸಿ ವಿಕಾಸ್ ಕಿಶೋರ್ ಸುರಳ್ಕರ್ ಪೊಲೀಸರಿಗೆ ಸೂಚನೆ ನೀಡಿದರು.