ಕೊಪ್ಪಳ: ಜಿಲ್ಲೆಯಲ್ಲಿ ಸೋಮವಾರ 224 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ 61, ಗಂಗಾವತಿ 85, ಕುಷ್ಟಗಿ 18, ಹಾಗೂ ಯಲಬುರ್ಗಾ ತಾಲೂಕಿನ 60 ಜನರು ಸೇರಿ ಒಟ್ಟು 224 ಮಂದಿಗೆ ಪಾಸಿಟಿವ್ ಬಂದಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 28,797 ಆಗಿದ್ದು, ಇದುವರೆಗೆ 472 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಇದನ್ನೂಓದಿ: ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ: ಕೆಂಪು ವಲಯದಿಂದ ಕಿತ್ತಳೆಗೆ ತಿರುಗಿದ ತುಮಕೂರು ಜಿಲ್ಲೆ
ಸೋಮವಾರ 534 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 24,193 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸದ್ಯ, ಜಿಲ್ಲೆಯಲ್ಲಿ 4,132 ಸಕ್ರಿಯ ಪ್ರಕರಣಗಳಿವೆ. ಒಟ್ಟು, 2,966 ಸೋಂಕಿತರು ಹೋಂ ಐಸೋಲೇಷನ್ಗೆ ಒಳಗಾಗಿದ್ದು, 1,166 ಜನ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.