ಕೊಪ್ಪಳ :ಜಿಲ್ಲೆಯಲ್ಲಿ ಶುಕ್ರವಾರ 577 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ 122, ಗಂಗಾವತಿಯಲ್ಲಿ 214, ಕುಷ್ಟಗಿಯಲ್ಲಿ 28 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 213 ಸೇರಿ ಒಟ್ಟು 577 ಜನರಲ್ಲಿ ಸೋಂಕು ಕಂಡು ಬಂದಿದೆ. ಈ ಮೂಲಕ ಒಟ್ಟು ಸಂಖ್ಯೆ 21,373 ಆಗಿದೆ.
ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಓದಿ : ಮಂಡ್ಯದಲ್ಲಿ 1,110 ಜನರಿಗೆ ಕೋವಿಡ್ ಪಾಸಿಟಿವ್ : 11 ಮಂದಿ ಮಹಾಮಾರಿಗೆ ಬಲಿ
ಶುಕ್ರವಾರ 9 ಮಂದಿ ಸೋಂಕಿತರು ಮೃತಪಟ್ಟಿದ್ದು, 94 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 349 ಸೋಂಕಿತರು ಸಾವಿಗೀಡಾಗಿದ್ದರೆ, ಒಟ್ಟು 16,267 ಮಂದಿ ಗುಣಮುಖರಾಗಿದ್ದಾರೆ.
ಸದ್ಯ, 4,757 ಸಕ್ರಿಯ ಪ್ರಕರಣಗಳಿದ್ದು, 4,276 ಜನ ಸೋಂಕಿತರು ಹೋಂ ಐಸೋಲೇಷನ್ನಲ್ಲಿದ್ದಾರೆ. 481 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.