ಕೊಪ್ಪಳ:ಲಿಬೇರಿಯಾ ದೇಶಕ್ಕೆ ದುಡಿಯಲು ಹೋಗಿದ್ದ ಜಿಲ್ಲೆಯ ವ್ಯಕ್ತಿಯೊಬ್ಬ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ತಾಯ್ನಾಡಿಗೆ ತನ್ನನ್ನು ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮೆಹಬೂಬ್ ಸಾಬ್ ಪಾಸ್ಪೋರ್ಟ್ ಜಿಲ್ಲೆಯ ಗಂಗಾವತಿ ನಗರದ ನಿವಾಸಿ ಮೆಹಬೂಬ ಎಂಬುವರು ಲಿಬೇರಿಯಾ ದೇಶದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೈಡ್ರಾಲಿಕ್ ಮೆಕ್ಯಾನಿಕ್ ಆಗಿರುವ ಮೆಹಬೂಬ್ ಅವರು ಕಳೆದ ನಾಲ್ಕು ತಿಂಗಳ ಹಿಂದೆ ಲಿಬೇರಿಯಾ ದೇಶದಲ್ಲಿನ ಜಿವಿಎಲ್ ಸೆನೋ ಎಂಬ ಕಂಪನಿಯಲ್ಲಿ ಕೆಲಸ ಮಾಡಲು ಲಿಬೇರಿಯಾಕ್ಕೆ ತೆರಳಿದ್ದರು.
ಮೆಹಬೂಬ ಸಾಬ್ನನ್ನು ಬಿಡುಗಡೆಗೊಳಿಸುವಂತೆ ಮನವಿ ಕಳೆದ ನಾಲ್ಕು ತಿಂಗಳಿಂದ ಮೆಹಬೂಬ್ ಅವರಿಗೆ ರಜೆಯನ್ನು ನೀಡದೆ ಕೆಲಸ ಮಾಡಿಸಿಕೊಂಡು ವೇತನವನ್ನೂ ಸಹ ಕೊಟ್ಟಿಲ್ಲವಂತೆ. ಗುಡ್ಡಗಾಡು ಪ್ರದೇಶದಲ್ಲಿ ಕೆಲಸಕ್ಕೆ ನೇಮಿಸಿದ್ದು, ಸರಿಯಾಗಿ ಊಟ ನೀರು ಸಹ ನೀಡುತ್ತಿಲ್ಲ ಎಂದು ತಮ್ಮ ಸಂಕಷ್ಟವನ್ನು ಮೆಹಬೂಬ್ ಆಡಿಯೋ ಮೂಲಕ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.
ಕನ್ನಡಿಗರೇ ಆರಂಭಿಸಿರುವ ಏಮ್ ಇಂಡಿಯಾ ಫೋರಂ ಸಂಸ್ಥೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ಮೆಹಬೂಬ್ ಅವರು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದಾರೆ. ಸಂಸ್ಥೆಯವರು ಸಹ ಲಿಬೇರಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಓದಿ:ಇದು ವಿಶ್ವದಲ್ಲೇ ಅತೀ ಎತ್ತರದ ಚಾಮುಂಡಿ ವಿಗ್ರಹ: ಮುಸ್ಲಿಂ ಕುಶಲಕರ್ಮಿಗಳ ಆಕರ್ಷಕ ನಿರ್ಮಾಣ