ಕೊಪ್ಪಳ: ಬಿಸಿಲನಾಡು ಕೊಪ್ಪಳದಲ್ಲಿ ಕಳೆದೊಂದು ತಿಂಗಳಿನಿಂದ ಬೇಸಿಗೆಯ ಬಿರು ಬಿಸಿಲಿಗಿಂತಲೂ ಹೆಚ್ಚು ಕಾವು ಹೆಚ್ಚಿಸಿದ್ದ ವಿಧಾನಸಭಾ ಚುನಾವಣೆ 2023ರ ಫಲಿತಾಂಶ ಇಂದು ಹೊರಬಿದ್ದಿದ್ದು ಕೊಪ್ಪಳದ 5 ವಿಧಾನಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರದಲ್ಲಿ ಕಾಂಗ್ರೆಸ್, ತಲಾ ಒಂದು ಕ್ಷೇತ್ರದಲ್ಲಿ ಬಿಜೆಪಿ, ಕೆಆರ್‌ಪಿಪಿ ಗೆಲುವು ಸಾಧಿಸಿದೆ.
ಕೊಪ್ಪಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ರಾಘವೇಂದ್ರ ಹಿಟ್ನಾಳ ಹ್ಯಾಟ್ರಿಕ್ ಗೆಲುವು ಪಡೆದರು. ತ್ರೀಕೋನ ಸ್ಫರ್ಧೆ ಏರ್ಪಟ್ಟಿದ್ದ ಕೊಪ್ಪಳದಲ್ಲಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ಅವರಿಗಿಂತ 36,260 ಮತಗಳ ಲೀಡ್ ಪಡೆದು ವಿಜಯಶಾಲಿಯಾಗಿದ್ದಾರೆ.
ಯಲಬುರ್ಗಾ ಕ್ಷೇತ್ರದಲ್ಲಿ ರೆಡ್ಡಿಗಳಿಬ್ಬರ ಮಧ್ಯೆ ನೇರ ಹಣಾಹಣಿ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಸವರಾಜ ರಾಯರಡ್ಡಿ ಗೆದ್ದಿದ್ದು, ಇದು ಅವರ 6ನೇ ಗೆಲುವಾಗಿದೆ. ಪ್ರತಿಸ್ಪರ್ಧಿ ಹಾಲಪ್ಪ ಆಚಾರ್‌ಗಿಂತ 17,181 ಮತಗಳನ್ನು ಪಡೆಯುವ ಮೂಲಕ ಗೆದ್ದರು. ಕನಕಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಶಿವರಾಜ ತಂಗಡಗಿ ಗೆಲುವು ಸಾಧಿಸಿದ್ದು, ಇದು ಅವರ ಮೂರನೇಯ ಗೆಲುವಾಗಿದೆ. ಪ್ರತಿಸ್ಪರ್ಧಿ ಬಸವರಾಜ ದಡೇಸಗೂರ ಅವರಿಗಿಂತ 42,277 ಮತಗಳ ಲೀಡ್ ಪಡೆದಿದ್ದಾರೆ.
ಕುಷ್ಟಗಿಯಲ್ಲಿ ಹಳೆಯ ಸಂಪ್ರಾದಾಯ ಮುಂದುವರೆದಿದ್ದು ಸತರ ಎರಡನೇ ಬಾರಿ ಇಲ್ಲಿ ಬಿಜೆಪಿ ಹೊರತುಪಡಿಸಿ ಇತರೆ ಪಕ್ಷದ ಅಭ್ಯರ್ಥಿಗಳಾರೂ ಗೆಲ್ಲುವುದಿಲ್ಲ ಎಂಬುದು ಈ ಬಾರಿಯೂ ನಿಜವಾಗಿದೆ. ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ಅಮರೇಗೌಡ ಬಯ್ಯಾಪುರ ಅವರನ್ನು 9039 ಮತಗಳಿಂದ ಸೋಲಿಸಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿದ್ದ ಗಾಲಿ ಜನಾರ್ಧನ ರೆಡ್ಡಿ ಗೆಲುವು ಕಂಡಿದ್ದಾರೆ. ಬಿಜೆಪಿ ತೊರೆದ ನಂತರ ಇದು ಅವರ ಪ್ರಥಮ ಗೆಲುವು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಶಾಸಕ ಪರಣ್ಣ ಮುನವಳ್ಳಿ ಅವರನ್ನು 8,266 ಮತಗಳ ಲೀಡ್ ಪಡೆಯುವ ಮೂಲಕ ಸೋಲಿಸಿದ್ದಾರೆ. ಹನುಮನ ಜನ್ಮಸ್ಥಳದಲ್ಲಿ ಕೆಆರ್‌ಪಿಪಿ ಗೆದ್ದಿದ್ದು ಬಿಜೆಪಿಗೆ ಮುಖಭಂಗವಾದಂತಾಗಿದೆ.
ಗಂಗಾವತಿ ಕ್ಷೇತ್ರದ ಫಲಿತಾಂಶ:
ಗಾಲಿ ಜನಾರ್ದನರೆಡ್ಡಿ - 66,213 ಮತಗಳು
ಇಕ್ಬಾಲ್ ಅನ್ಸಾರಿ (ಕಾಂಗ್ರೆಸ್) - 57,941
ಪರಣ್ಣ ಮುನವಳ್ಳಿ (ಬಿಜೆಪಿ) - 29,160
ಗೆಲುವಿನ ಅಂತರ - 8,266
ಕೊಪ್ಪಳ ಕ್ಷೇತ್ರದ ಫಲಿತಾಂಶ: