ಕೊಪ್ಪಳ:ಲಂಚ ಪಡೆಯುವಾಗ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಕಾರ್ಯದರ್ಶಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮ ಪಂಚಾಯತ್ ಪಿಡಿಓ ಶೇಖಸಾಬ್ ಹಾಗೂ ಕಾರ್ಯದರ್ಶಿ ನೂರುಲ್ಲಾ ಹಕ್ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಗಳು.
ಆಸ್ತಿಗೆ ಸಂಬಂಧಿಸಿದಂತೆ 11ಬಿ ಮಾಡಿಕೊಡಲು ಬಂಡಿಬಸಪ್ಪ ಕ್ಯಾಂಪ್ ನಿವಾಸಿ ವಿಜಯ ಕುಮಾರ್ ಎಂಬುವರಿಗೆ 6000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ವಿಜಯಕುಮಾರ್ ಅವರಿಂದ ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.