ಕೊಪ್ಪಳ: ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಾಗಿ ಮಕ್ಕಳಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.
ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಾಗಿ ಮಕ್ಕಳಿಂದ ಜಾಗೃತಿ - kannnada news
ಕೊಪ್ಬಳದಲ್ಲಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಾಗಿ ಪುಟ್ಟ ಮಕ್ಕಳು ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದರು.
ಜಿಲ್ಲಾ ಕೇಂದ್ರ ಕೊಪ್ಪಳ ನಗರದಿಂದ ಕೂಗಳತೆ ದೂರದಲ್ಲಿರುವ ಭಾಗ್ಯನಗರ ಪಟ್ಟಣದ ಧನ್ವಂತರಿ ಕಾಲೋನಿಯ ಮಕ್ಕಳಾದ ಅಭಿಷೇಕ್, ಅರ್ಪಿತಾ, ಸಹನಾ, ಸಿಂಚನಾ, ಸಮಾನವಿ, ಸಮೃದ್ಧ ಬೆಳ್ಳಂಬೆಳಗ್ಗೆ ಬಯಲು ಶೌಚಕ್ಕೆ ತೆರಳುತ್ತಿದ್ದವರನ್ನು ತಡೆದು ಬಯಲು ಬಹಿರ್ದೆಸೆಯಿಂದ ಆಗುವ ಪರಿಣಾಮಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದರು ಹಾಗೂ ವೈಯಕ್ತಿಕ ಶೌಚಾಲಯ ಹೊಂದುವಂತೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕಾಲೋನಿಯ ನಿವಾಸಿಗಳಾದ ಲಲಿತಾ ಅಳವಂಡಿ, ಸುಜಾತ ಪ್ರಜ್ವಲ್ , ವೀಣಾ ನಾಯಕ್ ,ರಾಖಿ ಜಾಣಾ, ಶಂಕ್ರಮ್ಮ ಶಿಂಗಾಡಿ, ಪದ್ಮಾವತಿ ನುಗಡೊಣಿ, ಸಿಂಧೂ ಉಜ್ವಲ್, ರೇಖಾ ಮಡಿವಾಳರ್ ಮಕ್ಕಳಿಗೆ ಸಾಥ್ ನೀಡಿದರು.