ಕುಷ್ಟಗಿ (ಕೊಪ್ಪಳ):ತಾಲೂಕಿನ ತಳವಗೇರಾ ಹಾಗೂ ಅಡವಿಬಾವಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಡಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿಯನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪರಿಶೀಲಿಸಿದರು.
ಸಿಸಿ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಅಮರೇಗೌಡ ಬಯ್ಯಾಪುರ - ಸಿಸಿ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ
ಕುಷ್ಟಗಿ ತಾಲೂಕಿನಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪರಿಶೀಲನೆ ನಡೆಸಿದರು.

Kustagi
ತಳವಗೇರಾ ಗ್ರಾಮದ ಎಸ್ಸಿ-ಎಸ್ಟಿ ಕಾಲೋನಿಯಲ್ಲಿ 15 ಲಕ್ಷ ರೂ. ವೆಚ್ಚದ ಹಾಗೂ ಅಡವಿಬಾವಿ ಗ್ರಾಮದಲ್ಲಿ 12 ಲಕ್ಷರೂ. ವೆಚ್ಚದ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು.
ಇದೇ ರೀತಿಯ ಗುಣಮಟ್ಟವನ್ನು ಕಾಯ್ದುಕೊಂಡು ಕ್ಯೂರಿಂಗ್ ಸರಿಯಾಗಿ ನಿರ್ವಹಿಸುವಂತೆ ಕೆಬಿಜೆಎನ್ ಎಲ್ ಸಹಾಯಕ ಅಭಿಯಂತರರಾದ ಯೋಗಿರಾಜ್ ತೇಲ್ಕರ್ ಅವರಿಗೆ ಸೂಚನೆ ನೀಡಿದರು.