ಗಂಗಾವತಿ: ಕಳೆದ ಭಾನುವಾರ ಕೊಪ್ಪಳದಲ್ಲಿ ನಡೆದಿದ್ದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಸಂದರ್ಭದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಹಿನ್ನೆಲೆ ಕಾರಟಗಿಯ ಪಿಎಸ್ಐ ಅವಿನಾಶ ಕಾಂಬ್ಳೆ ಎಂಬುವರನ್ನು ಸೇವೆಯಿಂದ ಅಮಾನತು ಮಾಡಿ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡ ಸ್ವಾಮಿ ಆದೇಶ ನೀಡಿದ್ದಾರೆ.
ಕಾನ್ಸ್ಟೇಬಲ್ ಪರೀಕ್ಷೆ ವೇಳೆ ಕರ್ತವ್ಯಲೋಪ ಆರೋಪ: ಕಾರಟಗಿ ಪಿಎಸ್ಐ ಸೇವೆಯಿಂದ ಅಮಾನತು - Police Constable Examination
ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ವೇಳೆ ನಿಗದಿತ ಅವಧಿಗೆ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಪಿಎಸ್ಐಯೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪಿಎಸ್ಐ ಅವಿನಾಶ ಕಾಂಬ್ಳೆ
ಇದನ್ನೂ ಓದಿ: ಸರಹದ್ದು ಸಮಸ್ಯೆಯಿಂದ ಪ್ರಕರಣ ದಾಖಲಿಸಲು ವಿಳಂಬ: ಇಬ್ಬರು ಪಿಎಸ್ಐ ಅಮಾನತು
ಜಿಲ್ಲಾ ಕೇಂದ್ರದಲ್ಲಿ ನಡೆದ ಪೊಲೀಸ್ ಇಲಾಖೆಯ ಪರೀಕ್ಷಾ ಕಾರ್ಯಕ್ಕೆ ಕಾಂಬ್ಳೆ ಅವರನ್ನು ನಿಯೋಜಿಸಲಾಗಿತ್ತು. ಆದರೆ ನಿಗದಿತ ಅವಧಿಗೆ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್ಪಿ ಟಿ.ಶ್ರೀಧರ್, ಅವಿನಾಶ್ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು. ಈ ಹಿನ್ನೆಲೆ ಕಾಂಬ್ಳೆ ಅವರನ್ನು ಇಲಾಖಾ ವಿಚರಣೆ ಬಾಕಿ ಇಟ್ಟು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.