ಕೊಪ್ಪಳ:ಚೀನಾ ವಸ್ತುಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಚೀನಾ ವಸ್ತುಗಳನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ - ಕೊಪ್ಪಳ ಪ್ರತಿಭಟನೆ ಸುದ್ದಿ
ನರಿ ಬುದ್ಧಿಯ ಚೀನಾಗೆ ಬುದ್ಧಿ ಕಲಿಸಬೇಕು. ಹೀಗಾಗಿ ಚೀನಾದ ವಸ್ತುಗಳನ್ನು ದೇಶದಲ್ಲಿ ಬ್ಯಾನ್ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಪ್ರತಿಭಟನೆ ನಡೆಸಿದೆ.
Protest
ಕುಕನೂರು ಪಟ್ಟಣದ ಶಿರೂರು ವೀರಭದ್ರಪ್ಪ ಸರ್ಕಲ್ ಬಳಿ ಕರ್ನಾಟಕ ನವ ನಿರ್ಮಾಣ ಸೇನೆ ಪ್ರತಿಭಟನೆ ನಡೆಸಿ, ಚೀನಾದ ವಿರುದ್ಧ ಧಿಕ್ಕಾರ ಕೂಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿತು.
ಬಳಿಕ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಚೀನಾ ಪದೇ ಪದೆ ಕುತಂತ್ರ ಮಾಡುತ್ತಿದೆ. ಚೀನಾದ ಕುತಂತ್ರ ಬುದ್ಧಿಯಿಂದ ಇತ್ತೀಚೆಗೆ ದೇಶದ ಇಪ್ಪತ್ತು ಜನ ಯೋಧರು ಹುತಾತ್ಮರಾದರು. ನರಿ ಬುದ್ಧಿಯ ಚೀನಾಗೆ ಬುದ್ಧಿ ಕಲಿಸಬೇಕು. ಹೀಗಾಗಿ ಚೀನಾದ ವಸ್ತುಗಳನ್ನು ದೇಶದಲ್ಲಿ ಬ್ಯಾನ್ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.