ಕೊಪ್ಪಳ:ಕನ್ನಡ ವಿರೋಧಿ ಧೋರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ನಗರದ ಎಸ್ಬಿಐ ಬ್ಯಾಂಕಿನ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಕನ್ನಡ ವಿರೋಧಿ ಧೋರಣೆ ಕೈಬಿಡಿ: ’ಕನನಿಸೇ’ ಕಾರ್ಯಕರ್ತರಿಂದ ಒತ್ತಾಯ - ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು
ಬ್ಯಾಂಕಿನ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್ಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ಕೊಪ್ಪಳದಲ್ಲಿ ಎಚ್ಚರಿಸಿದ್ದಾರೆ.
ಎಸ್ಬಿಐ ಬ್ಯಾಂಕ್ ಮುಂದೆ ಕನವೇ ಕಾರ್ಯಕರ್ತರಿಂದ ಒತ್ತಾಯ..
ಕನನಿಸೇ ಮುಖಂಡ ವಿಜಯಕುಮಾರ್ ಕವಲೂರು ನೇತೃತ್ವದಲ್ಲಿ ಬ್ಯಾಂಕಿನ ಶಾಖೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ, ಬಳಿಕ ರಾಷ್ಟ್ರಭಾಷೆ ಹೆಸರಿನಲ್ಲಿ ಎಸ್ಬಿಐ ಬ್ಯಾಂಕಿನಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಬ್ಯಾಂಕ್ನ ಖಾತೆ ಪುಸ್ತಕ, ಚಲನ್ಗಳಲ್ಲಿ ನಾಡ ಭಾಷೆ ಕನ್ನಡ ಕಡೆಗಣಿಸಲಾಗಿದೆ ಎಂದು ಆಕ್ರೋಶಿತರಾದರು.
ಈ ಮೂಲಕ ಹಿಂದಿ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಬ್ಯಾಂಕಿನ ದೈನಂದಿನ ವ್ಯವಹಾರ ಮಾಡಲು ಕನ್ನಡ ಬಳಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್ಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಕಾರ್ಯಕರ್ತರು ಎಚ್ಚರಿಸಿದರು.
Last Updated : May 26, 2020, 9:40 PM IST