ಗಂಗಾವತಿ(ಕೊಪ್ಪಳ): ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಗುರುತಿಸಿಕೊಂಡಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ(ಯುಎಇ) ಬುರ್ಜ್ ಖಲೀಫಾ ಮುಂದೆ ಗಂಗಾವತಿ ಯುವಕ ಮೊಹಮ್ಮದ್ ಆಸೀಫ್ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 'ಕನ್ನಡ ಧ್ವಜ' ಹಿಡಿದು ಸಂಭ್ರಮಿಸಿದ್ದಾರೆ. ಗಂಗಾವತಿಯ ಕುವೆಂಪು ಬಡಾವಣೆಯ ನಿವಾಸಿ ಹಾಗು ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಮೊಹಮ್ಮದ್ ಆಸೀಫ್ ಪ್ರವಾಸಕ್ಕೆಂದು ಕೆಲ ದಿನಗಳ ಹಿಂದೆ ದುಬೈಗೆ ತೆರಳಿದ್ದರು.
ದುಬೈ ಬುರ್ಜ್ ಖಲೀಫಾ ಮುಂದೆ 'ಕನ್ನಡ ಧ್ವಜ' ಪ್ರದರ್ಶಿಸಿದ ಗಂಗಾವತಿ ಯುವಕ - ಕನ್ನಡ ಧ್ವಜ ಪ್ರದರ್ಶನ
ಗಂಗಾವತಿಯ ಕುವೆಂಪು ಬಡಾವಣೆಯ ನಿವಾಸಿ ಮೊಹಮ್ಮದ್ ಆಸೀಫ್ ಅವರು ಬುರ್ಜ್ ಖಲೀಫಾದ ಮುಂದೆ ಕನ್ನಡದ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ.
ಬುರ್ಜ್ ಖಲೀಫಾದ ಮುಂದೆ ಕನ್ನಡ ಧ್ವಜ ಪ್ರದರ್ಶನ
ಬುರ್ಜ್ ಖಲೀಫಾ ಬಗ್ಗೆ ಒಂದಿಷ್ಟು..: ಬುರ್ಜ್ ಖಲೀಫಾ 2,717 ಅಡಿ ಎತ್ತರವಿದೆ. ಇದರಲ್ಲಿ 163 ಮಹಡಿಗಳಿವೆ. ಸ್ಟೀಲ್ ಮತ್ತು ಕಾಂಕ್ರೀಟ್‌ನಿಂದ ನಿರ್ಮಿಸಲಾಗಿದೆ. ಇದರ ಮಾಲೀಕ ಎಮಾರ್ ಪ್ರಾಪರ್ಟೀಸ್. ಈ ಕಟ್ಟಡದ ನಿರ್ಮಾಣ ವೆಚ್ಚ ಸುಮಾರು 1.5 ಬಿಲಿಯನ್ ಯುಎಸ್ ಡಾಲರ್. 2010ರಲ್ಲಿ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಇದನ್ನು ಮೀರಿಸುವ ಕಟ್ಟಡ ಜಗತ್ತಿನಲ್ಲಿ ಮತ್ತೊಂದಿಲ್ಲ.
ಇದನ್ನೂ ಓದಿ:ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ.. 10ಸಾವಿರ ಅಡಿ ಕನ್ನಡ ಬಾವುಟದ ಮೆರವಣಿಗೆ