ಕೊಪ್ಪಳ: ನೇರವಾಗಿ ರೈತರ ಜಮೀನಿಗೆ ತೆರಳಿ ಸಸ್ಯ, ಬೆಳೆ ಹಾಗೂ ಮಣ್ಣು ಪರೀಕ್ಷೆಯ ಸೌಲಭ್ಯ ನೀಡಲಿರುವ ಕೃಷಿ ಸಂಜೀವಿನಿಯ 20 ಸಂಚಾರಿ ವಾಹನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದರು.
ಕೃಷಿ ಸಂಜೀವಿನಿ ಹೆಸರಿನ ಕೃಷಿ ವಾಹನಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ - karnataka chief minister BS Yadiyurappa to launch krishi sanjeevini
ಸಸ್ಯ, ಬೆಳೆ ಹಾಗೂ ಮಣ್ಣು ಪರೀಕ್ಷೆಯ ಸೌಲಭ್ಯ ನೀಡಲಿರುವ ಕೃಷಿ ಸಂಜೀವಿನಿಯ 20 ವಾಹನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊಪ್ಪಳದಲ್ಲಿ ಚಾಲನೆ ನೀಡಿದರು.
![ಕೃಷಿ ಸಂಜೀವಿನಿ ಹೆಸರಿನ ಕೃಷಿ ವಾಹನಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ Krushi sanjeevini vehicle](https://etvbharatimages.akamaized.net/etvbharat/prod-images/768-512-10177966-947-10177966-1610184430129.jpg)
ಕೃಷಿ ಸಂಜೀವಿನಿ ವಾಹನ
ಜಿಲ್ಲೆಯ ಭಾನಾಪುರ ಬಳಿ ಏಕಸ್ ಸಂಸ್ಥೆಯ ಆಟಿಕೆ ವಸ್ತುಗಳ ತಯಾರಿಕಾ ಘಟಕದ ಭೂಮಿ ಪೂಜೆಗೂ ಮುನ್ನ ಕೃಷಿ ಸಂಜೀವಿನಿ ಸಂಚಾರಿ ವಾಹನಗಳಿಗೆ ಚಾಲನೆ ನೀಡಿದರು. ಅಲ್ಲದೇ, ಜಿಲ್ಲೆಯ ಒಟ್ಟು 1.5 ಲಕ್ಷ ರೈತರಿಗೆ ಸ್ವಾಭಿಮಾನಿ ರೈತ ಕಾರ್ಡ್ ವಿತರಣೆಯಾಗಲಿದೆ. ಸಾಂಕೇತಿಕವಾಗಿ ರೈತರಿಗೆಸ್ವಾಭಿಮಾನಿ ರೈತಕಾರ್ಡ್ ವಿತರಿಸಿದರು.
ಕೃಷಿ ವಾಹನಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ
ರಾಜ್ಯದಲ್ಲೇ ಮೊದಲು ಕೊಪ್ಪಳ ಜಿಲ್ಲೆಗೆ ರೈತ ಸಂಜೀವಿನಿ ವಾಹನಗಳು ಬಂದಿವೆ. ರೈತರಿಗೆ ಅನುಕೂಲವಾಗಲಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.