ಕರ್ನಾಟಕ

karnataka

ETV Bharat / state

'ನಾವು ಸತ್ತಿಲ್ಲ, ಬದುಕಿದ್ದೀವಿ ಅಂತಾ ತೋರಿಸೋಕೆ ಕಾಂಗ್ರೆಸ್​​ನವರು ಮಾತನಾಡುತ್ತಿದ್ದಾರೆ' - ಕೊಪ್ಪಳದಲ್ಲಿ ಕೆ.ಎಸ್ ಈಶ್ವರಪ್ಪ ಹೇಳಿಕೆ

ಬಿಟ್ ಕಾಯಿನ್ ಹಗರಣದಲ್ಲಿ (Karnataka Bitcoin scam) ಬಿಜೆಪಿ ನಾಯಕರು ಯಾರೂ ಇಲ್ಲ ಎಂದು ಗೃಹಸಚಿವರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರು ಈ ಪ್ರಕರಣದಲ್ಲಿದ್ದರೆ, ಕಾಂಗ್ರೆಸ್​ನವರು ದಾಖಲೆ ಬಿಡುಗಡೆ ಮಾಡಲಿ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಕೊಪ್ಪಳದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ
ಕೊಪ್ಪಳದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ

By

Published : Nov 10, 2021, 3:19 PM IST

ಕೊಪ್ಪಳ:ಕಾಂಗ್ರೆಸ್​​ನವರು ತಾವು ಸತ್ತಿಲ್ಲ, ಬದುಕಿದ್ದೀವಿ ಅಂತಾ ತೋರಿಸೋಕೆ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.


ನಗರದಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ (Karnataka Bitcoin scam) ಬಗ್ಗೆ ಕಾಂಗ್ರೆಸ್‌ನವರು ಸ್ಪರ್ಧಾತ್ಮಕವಾಗಿ ಮಾತನಾಡುತ್ತಿದ್ದಾರೆ. ನಾನು ಮುಂದೆ, ನಾನು ಮುಂದೆ ಅಂತಾ ಸಿದ್ದರಾಮಯ್ಯ, ಡಿಕೆಶಿ ಮಾತನಾಡುತ್ತಿದ್ದಾರೆ. ಅವರ ಜೊತೆ ಈಗ ಪ್ರಿಯಾಂಕ್ ಖರ್ಗೆ ಸೇರಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಬೇಜವ್ದಾರಿಯಾಗಿ ಮಾತನಾಡುತ್ತಿದ್ದಾರೆ‌. ಮತ್ತೊಮ್ಮೆ ಕಾಂಗ್ರೆಸ್ ಬ್ಲಾಕ್ ಮೇಲ್ ಮಾಡುತ್ತಿದೆ ಎಂದರು.

ಆ ಭಾಗದಲ್ಲಿ ಪ್ರಿಯಾಂಕ್ ಖರ್ಗೆ ವಸೂಲಿ ಕಿಂಗ್. ಗೃಹ ಸಚಿವ ಆರಗ ಜ್ಞಾನೇಂದ್ರ ವಸೂಲಿ ಮಾಡಲ್ಲ. ಪ್ರಿಯಾಂಕ್ ಖರ್ಗೆ ಪ್ರಚಾರಕ್ಕಾಗಿ ದಿನವೂ ಒಂದು ಹೇಳಿಕೆ ಕೊಡುತ್ತಾರೆ ಎಂದು ಈಶ್ವರಪ್ಪ ಆರೋಪಿಸಿದರು.

ಇನ್ನು ‌ಬಿಟ್ ಕಾಯಿನ್ (Bitcoin) ಬಗ್ಗೆ ಗೃಹ ಸಚಿವರು, ಬಿಜೆಪಿ ನಾಯಕರು ಯಾರೂ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರು ಈ ಪ್ರಕರಣದಲ್ಲಿದ್ದರೆ, ಕಾಂಗ್ರೆಸ್​ನವರು ದಾಖಲೆ ಬಿಡುಗಡೆ ಮಾಡಲಿ ಎಂದರು.

ಮೂರು ಜನರನ್ನು ಸಿಎಂ ಮಾಡುವುದು ಕಾಂಗ್ರೆಸ್‌ ಅಭ್ಯಾಸ. ನಮ್ಮಲ್ಲಿ ಸಿಎಂ ಬದಲಾಗಲ್ಲ. ಬಿಜೆಪಿಯ ಯಾವ ನಾಯಕರು, ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಅಂತಾ ಹೇಳಿಲ್ಲ. ಈ ಬಾರಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾಗಲ್ಲ. ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರೇ ಇರ್ತಾರೆ ಎಂದರು.

ABOUT THE AUTHOR

...view details