ಕೊಪ್ಪಳ:ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ತಮ್ಮ ಆಸ್ತಿ ಎಷ್ಟಿದೆಯೋ ಅಷ್ಟು ಹತ್ತಿರವಾಗಿ ಸಾಲವನ್ನೂ ಹೊಂದಿದ್ದಾರೆ. ಈ ಕುರಿತಂತೆ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾವು ಹೊಂದಿರುವ ಆಸ್ತಿ ಮತ್ತು ಆದಾಯ ವಿವರವನ್ನು ತಿಳಿಸಿದ್ದಾರೆ.
ಆಸ್ತಿ ಎಷ್ಟೋ ಅಷ್ಟೇ ಸಾಲ: ಆದಾಯ ವಿವರ ತಿಳಿಸಿದ ಸಂಗಣ್ಣ ಕರಡಿ - etv bharat
ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಚುನಾವಣಾಧಿಕಾರಿಗೆ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದು, ತಾವು ಎಷ್ಟು ಆಸ್ತಿ ಹೊಂದಿದ್ದಾರೋ ಅಷ್ಟು ಸಾಲವನ್ನೂ ತೋರಿಸಿದ್ದಾರೆ.
ಕರಡಿ ಸಂಗಣ್ಣ ಅವರು ಒಟ್ಟು 2.51 ಕೋಟಿ ರೂ. ಆಸ್ತಿ ಹೊಂದಿದ್ದು, 2.3 ಕೋಟಿ ರೂ. ಸಾಲವಿದೆ ಎಂದು ಮಾಹಿತಿ ನೀಡಿದ್ದಾರೆ. ಅವರ ಪತ್ನಿ ನಿಂಗಮ್ಮ 35.9 ಲಕ್ಷ ರೂ. ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ. ಇದರ ಜೊತೆಗೆ 21 ಲಕ್ಷ ರೂ. ಸಾಲಗಾರರು ಆಗಿದ್ದಾರೆ. ಅಭ್ಯರ್ಥಿ ಕರಡಿ ಸಂಗಣ್ಣ ಅವರ ಕೈಯಲ್ಲಿ 2 ಲಕ್ಷ ರೂ. ನಗದು ಹಾಗೂ ಪತ್ನಿ ನಿಂಗಮ್ಮ ಅವರ ಕೈಯಲ್ಲಿ 1 ಲಕ್ಷ ರೂ. ನಗದು ಇದೆ ಎಂದು ಮಾಹಿತಿ ನೀಡಿದ್ದಾರೆ.
ವ್ಯವಸಾಯ ಆದಾಯದ ಮೂಲವಾಗಿ 14 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಇನ್ನು ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯ 38.91 ಲಕ್ಷ ರೂ. ತೋರಿಸಿದ್ದಾರೆ. ಪತ್ನಿ ನಿಂಗಮ್ಮ ಗೃಹಿಣಿಯಾಗಿದ್ದು, ಆದಾಯ ತೋರಿಸಿಲ್ಲ. ಕರಡಿ ಸಂಗಣ್ಣ ಅವರು ವಿವಿಧ ಬ್ಯಾಂಕ್ಗಳಲ್ಲಿ ನಾಲ್ಕು ಖಾತೆಗಳನ್ನು ಹೊಂದಿದ್ದಾರೆ. 100 ಗ್ರಾಂ ಚಿನ್ನ, ಒಂದು ಫಾರ್ಚೂನರ್ ಕಾರು ಹೊಂದಿದ್ದಾರೆ. ಪತ್ನಿ ನಿಂಗಮ್ಮ ಬಳಿ 200 ಗ್ರಾಂ ಚಿನ್ನ, 350 ಗ್ರಾಂ ಬೆಳ್ಳಿ ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ್ದಾರೆ.