ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಪಂಪಾಸರೋವರದ ವಿಜಯಲಕ್ಷ್ಮಿ ಗರ್ಭಗುಡಿಯ ಮೂರ್ತಿ ಮತ್ತು ಶ್ರೀ ಚಕ್ರವನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಆಡಳಿತಾತ್ಮಕ ಲೋಪವಾಗಿರುವುದು ವಾಸ್ತವ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಆನೆಗೊಂದಿ ಸಮೀಪದ ಪಂಪಾಸರೋವರದಲ್ಲಿನ ಪ್ರಾಚೀನ ಕಾಲದ ವಿಜಯಲಕ್ಷ್ಮಿ ದೇಗುಲವನ್ನು ರಾತ್ರೋರಾತ್ರಿ ಸ್ಥಳಾಂತರ ಮಾಡಿದ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಘಟನೆ ನಡೆದು ಹತ್ತು ದಿನದ ಬಳಿಕ ಸ್ಥಳಕ್ಕೆ ಸಂಸದ ಕರಡಿ ಸಂಗಣ್ಣ ಭೇಟಿ ನೀಡಿ ಪರಿಶೀಲಿಸಿದರು.
ಪಂಪಾಸರೋವರದ ವಿಜಯಲಕ್ಷ್ಮಿ ದೇಗುಲಕ್ಕೆ ಕರಡಿ ಸಂಗಣ್ಣ ಭೇಟಿ ನೀಡಿರುವುದು.. ಬಳಿಕ ಮಾತನಾಡಿದ ಅವರು, ವಿಗ್ರಹ ಸ್ಥಾನಪಲ್ಲಟ ಮಾಡುವ ಸಂದರ್ಭದಲ್ಲಿ ಆನೆಗೊಂದಿ ರಾಜಮನೆತನದ ಸದಸ್ಯರು ಮತ್ತು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಉಪಸ್ಥಿತಿಯಲ್ಲಿ ಕಾಮಗಾರಿ ಮಾಡಬೇಕಿತ್ತು. ಈ ವಿಚಾರದಲ್ಲಿ ಲೋಪವಾಗಿದೆ.
ಈಗಾಗಲೇ ಕೋಟ್ಯಂತರ ರೂ. ವೆಚ್ಚ ಮಾಡಿ ವೈಯಕ್ತಿಕವಾಗಿ ಸಚಿವ ಬಿ. ಶ್ರೀರಾಮುಲು ಅನೇಕ ದೇವಾಲಯಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಆದರೆ, ನಿಧಿ ಆಸೆಗಾಗಿ ವಿಜಯಲಕ್ಷ್ಮಿ ದೇಗುಲ ಧ್ವಂಸ ಮಾಡಲಾಗಿದೆ ಎನ್ನುವುದು ಸುಳ್ಳು ಎಂದರು.
ಇದನ್ನೂ ಓದಿ:ಜೀರ್ಣೊದ್ಧಾರದ ನೆಪದಲ್ಲಿ ಮೂಲ ವಿಗ್ರಹ ಸ್ಥಳಾಂತರ: ಸ್ಥಳೀಯರ ಆಕ್ರೋಶ