ಕುಷ್ಟಗಿ :ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜನ ಗುಂಪು ಸೇರಬಾರದು ಎನ್ನುವ ನಿರ್ಬಂಧದ ಹಿನ್ನೆಲೆಯಲ್ಲಿ ರೈತರ ಕಾರು ಹುಣ್ಣಿಮೆಯ ಕರಿ ಹರಿಯುವ ಸ್ಪರ್ಧೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಕಾರ ಹುಣ್ಣಿಮೆ ಕರಿ ಹರಿಯುವ ಸ್ಪರ್ಧೆಗೆ ಸಾಂಕೇತಿಕ ಚಾಲನೆ - ಕೊಪ್ಪಳ ಸುದ್ದಿ
ಕೊರೊನಾ ಇರುವುದರಿಂದ ಕುಷ್ಟಗಿಯಲ್ಲಿ ಅದ್ಧೂರಿಯಾಗಿ ನಡೆಯಬೇಕಿದ್ದ ಕಾರ ಹುಣ್ಣಿಮೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಕಾರ ಹುಣ್ಣಿಮೆ ಕರಿ ಹರಿಯುವ ಸ್ಪರ್ಧೆಗೆ ಸಾಂಕೇತಿಕ ಚಾಲನೆ
ಶುಕ್ರವಾರ ಸಂಜೆ ಕಾರ ಹುಣ್ಣಿಮೆ ಕರಿ ಹರಿಯುವ ಸಂಪ್ರದಾಯಿಕ ಸ್ಪರ್ಧೆ ಸಾಂಕೇತಿಕವಾಗಿ ನೆರವೇರಿತು. ಈ ಮೊದಲು ನಾಯಕವಾಡಿ ಓಣಿಯಲ್ಲಿ ಈ ಸಂಪ್ರದಾಯಿಕ ಸ್ಪರ್ಧೆ ನಡೆಸಲಾಯಿತು.
ಕೇವಲ ಕೆಲವು ರೈತರ ಎತ್ತುಗಳಿಂದ ಕಾರ ಹುಣ್ಣಿಮೆ ಕರಿ ಹರಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಇಲ್ಲಿನ ಕಟ್ಟಿ ದುರಗಮ್ಮ ದೇವಿ ದೇವಸ್ಥಾನದ ಪಾದಗಟ್ಟೆಯಿಂದ ದೇವಿ ಸನ್ನಿಧಿಯವರೆಗೂ ಏಳೆಂಟು ಎತ್ತುಗಳ ಕರಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.