ಕರ್ನಾಟಕ

karnataka

ETV Bharat / state

ಕಸಾಪಗೆ ಒಂದು ಶತಮಾನದ ಇತಿಹಾಸವಿದೆ: ಶೇಖರಗೌಡ ಮಾಲಿಪಾಟೀಲ್ - kannada sahitya parishath has a century of history

ಕನ್ನಡಿಗರ ಆತ್ಮಸಾಕ್ಷಿಯಂತೆ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಶತಮಾನದಷ್ಟು ಇತಿಹಾಸವಿದೆ. ಆದ್ರೆ ಇಲ್ಲಿಯವರೆಗೂ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಂದ ಯಾರೊಬ್ಬರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿಲ್ಲ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ಶೇಖರಗೌಡ ಮಾಲಿಪಾಟೀಲ್ ಹೇಳಿದ್ದಾರೆ.

ಶೇಖರಗೌಡ ಮಾಲಿಪಾಟೀಲ್
ಶೇಖರಗೌಡ ಮಾಲಿಪಾಟೀಲ್

By

Published : Jan 5, 2021, 4:25 PM IST

ಗಂಗಾವತಿ:ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದು 105 ವರ್ಷವಾಗಿದ್ದು, ಇಲ್ಲಿಯವರೆಗೂ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಿಂದ ಯಾರೊಬ್ಬರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿಲ್ಲ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ಶೇಖರಗೌಡ ಮಾಲಿಪಾಟೀಲ್ ಹೇಳಿದ್ದಾರೆ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ಶೇಖರಗೌಡ ಮಾಲಿಪಾಟೀಲ್

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಿಗರ ಆತ್ಮಸಾಕ್ಷಿಯಂತೆ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಶತಮಾನದಷ್ಟು ಇತಿಹಾಸವಿದೆ. ರಾಜ್ಯದ ಸಮಸ್ತ ಜನಜೀವನ, ಸಾಂಸ್ಕೃತಿಕ ಪ್ರತಿರೂಪದಂತಿರುವ ಸಂಸ್ಥೆಯಲ್ಲಿ ಇದುವರೆಗೂ ಕಲ್ಯಾಣ ಕರ್ನಾಟಕದಿಂದ ಒಬ್ಬರೇ ಒಬ್ಬರು ಅಧ್ಯಕ್ಷರಾಗಿಲ್ಲ.

ಓದಿ:ರಾಜಕೀಯ ಚಟುವಟಿಕೆಗಳ ನಡುವೆಯೂ 'ಬ್ಯಾಟ್​' ಬೀಸಿದ ರಾಘವೇಂದ್ರ ಹಿಟ್ನಾಳ್​!

ಹೀಗಾಗಿ ತಾರತಮ್ಯ ನೀತಿ ಸರಿಪಡಿಸುವ ಉದ್ದೇಶಕ್ಕೆ ಪರಷತ್ತಿನ ಎಲ್ಲಾ ಸದಸ್ಯ ಮತದಾರರು ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೇ ಹಂಸಲೇಖರಂತ ಕಲಾವಿದರು, ಸಾಹಿತ್ಯ ವಲಯದ ಸಾಕಷ್ಟು ಜನ ಈ ಬಾರಿ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ಸಿಗಬೇಕು ಎಂದು ಪ್ರೋತ್ಸಾಹ ನೀಡುತ್ತಿದ್ದಾರೆ.

ABOUT THE AUTHOR

...view details