ಗಂಗಾವತಿ: ಸ್ಯಾಂಡಲ್ವುಡ್ ರ್‍ಯಾಪರ್ ಚಂದನ್ ಶೆಟ್ಟಿ ಅವರು ಸ್ನೇಹಿತರೊಂದಿಗೆ ತಾಲೂಕಿನ ಧಾರ್ಮಿಕ ಪುಣ್ಯ ಕ್ಷೇತ್ರ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮದುವೆ ಹರಕೆ ತೀರಿಸಲು ಅಂಜನಾದ್ರಿಗೆ ಬಂದ ರ್‍ಯಾಪರ್ ಚಂದನ್ ಶೆಟ್ಟಿ - Kannada Rapper Chandan Shetty visits Anjanadri hills
ಮುಂದಿನ ದಿನಗಳಲ್ಲಿ ಪತ್ನಿ ಹಾಗೂ ಕುಟುಂಬ ಸದಸ್ಯರ ಸಮೇತ ಬೆಟ್ಟಕ್ಕೆ ಆಗಮಿಸುತ್ತೇನೆ. ಅಂಜನಾದ್ರಿ ಬೆಟ್ಟದ ಆಂಜನೇಯ ಭಕ್ತರ ಬಯಕೆಗಳನ್ನು ಈಡೇರಿಸುತ್ತಾನೆ ಎಂಬುದು ಸಾಬೀತಾಗಿದೆ..
Kannada Rapper Chandan Shetty
ಹಿಂದೊಮ್ಮೆ ಅಂಜನಾದ್ರಿಗೆ ಭೇಟಿ ನೀಡಿದ್ದ ಚಂದನ್ ಶೆಟ್ಟಿ ಅವರು ಮದುವೆಯಾದ್ರೆ ಮತ್ತೆ ಬರುವುದಾಗಿ ಹರಕೆ ಹೊತ್ತಿದ್ದರಂತೆ. ಇಲ್ಲಿಗೆ ಬಂದು ಹೋದ ಒಂದೇ ತಿಂಗಳಲ್ಲಿ ಚಂದನ್ ಮದುವೆಯಾಗಿದ್ದು, ಆ ಹರಕೆ ತೀರಿಸಲು ಆಗಮಿಸಿದ್ದರು ಎಂದು ದೇಗುಲದ ಸಿಬ್ಬಂದಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ಮುಂದಿನ ದಿನಗಳಲ್ಲಿ ಪತ್ನಿ ಹಾಗೂ ಕುಟುಂಬ ಸದಸ್ಯರ ಸಮೇತ ಬೆಟ್ಟಕ್ಕೆ ಆಗಮಿಸುತ್ತೇನೆ. ಅಂಜನಾದ್ರಿ ಬೆಟ್ಟದ ಆಂಜನೇಯ ಭಕ್ತರ ಬಯಕೆಗಳನ್ನು ಈಡೇರಿಸುತ್ತಾನೆ ಎಂಬುದು ಸಾಬೀತಾಗಿದೆ. ಈ ನಂಬಿಕೆ ಹಿನ್ನೆಲೆ ಭೇಟಿ ನೀಡುವುದಾಗಿ ತಿಳಿಸಿದರು.