ಕರ್ನಾಟಕ

karnataka

ETV Bharat / state

ಮ್ಯಾರಾಥಾನ್​ಗೆ ಮಹಾರಾಷ್ಟ್ರ ಸ್ಪರ್ಧಿ ಭಾಗವಹಿಸಲು ಕನ್ನಡಿಗರ ವಿರೋಧ - ರಾಜ್ಯಮಟ್ಟದ ಮ್ಯಾರಾಥಾನ್ ಓಟದ ಸ್ಪರ್ಧೆ ಕುಷ್ಟಗಿ

ಕನ್ನಡ ರಾಜ್ಯೋತ್ಸವ ಸ್ಪರ್ಧೆಯಾಗಿದ್ದು, ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುವ ಮಹಾರಾಷ್ಟ್ರದ ಜನರು, ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯ್ತು..

kushtagi
ಪ್ರವೀಣ ಮಹಾರಾಷ್ಟ್ರದ ಮೂಲದ ಯುವಕ

By

Published : Nov 1, 2020, 4:27 PM IST

Updated : Nov 1, 2020, 6:27 PM IST

ಕುಷ್ಟಗಿ(ಕೊಪ್ಪಳ) :ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರದ ಯುವಕನಿಗೆ ಕನ್ನಡಿಗ ಸ್ಪರ್ಧಿಗಳು ಅಡ್ಡಿಪಡಿಸಿದ ಪ್ರಸಂಗ ಇವತ್ತು ಕುಷ್ಟಗಿಯಲ್ಲಿ ಕಾರ್ಗಿಲ್ ವೃತ್ತದಲ್ಲಿ ನಡೆದಿದೆ.

ಕುಷ್ಟಗಿಯಲ್ಲಿಕನ್ನಡ ರಾಜ್ಯೋತ್ಸವದ ಪ್ರಯುಕ್ತಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಮ್ಯಾರಾಥಾನ್ ಓಟದ ಸ್ಪರ್ಧೆಯ ವೇಳೆ ಮಹಾರಾಷ್ಟ್ರದ ಯುವಕನಿಗೆ ಕನ್ನಡ ಸ್ಪರ್ಧಿಗಳು ತಕಾರರು ವ್ಯಕ್ತಪಡಿಸಿ, ಆತ ಸ್ಪರ್ಧೆಯಿಂದಲೇ ಹಿಂದೆ ಸರಿಸಿದ ಪ್ರಸಂಗ ನಡೆಯಿತು.

ಮ್ಯಾರಾಥಾನ್ ಓಟದ ಸ್ಪರ್ಧೆಯಿಂದಲೇ ಹೊರಬಿದ್ದಮಹಾರಾಷ್ಟ್ರ ಮೂಲದ ಯುವಕ..

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಮೂಲದ ಪ್ರವೀಣ ಎಂಬ ಯುವಕ ಭಾಗವಹಿಸಲು ಬಂದಿದ್ದ. ಅಲ್ಲಿದ್ದ ವಿವಿಧ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಕನ್ನಡ ಸ್ಪರ್ಧಿಗಳು ಕನ್ನಡ ರಾಜ್ಯೋತ್ಸವ ಸ್ಪರ್ಧೆಯಾಗಿದ್ದು, ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುವ ಮಹಾರಾಷ್ಟ್ರದ ಜನರು, ಈ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಅದಕ್ಕೆ ಯುವಕ ದಸರಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದಾಗಿ, ಬೆಂಗಳೂರಲ್ಲಿ ಇರುವುದಾಗಿ ಹೇಳಿಕೊಂಡನಾದರೂ ಆಧಾರ್​ ಕಾರ್ಡ್​, ಪೂರಕ ದಾಖಲೆಗಳನ್ನು ತೋರಿಸಲು ನಿರಾಕರಿಸಿದ. ಇದರಿಂದ ಸಿಟ್ಟಿಗೆದ್ದ ಕನ್ನಡ ಸ್ಪರ್ಧಿಗಳು ಆತ ಸ್ಪರ್ಧಿಸಲು ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಆಯೋಜಕ ಎನ್‌ ಜೆ ಶಿಕ್ಷಣ ಸಂಸ್ಥೆಯ ಮಹೇಶ ಮಲಗಿಹಾಳ ಅವರು, ಮಹಾರಾಷ್ಟ್ರದ ಯುವಕನಿಗೆ ಭಾಗವಹಿಸಲು ನಿರಾಕರಿಸಿದರು. ಇದರಿಂದಾಗಿ ಯುವಕ ಪ್ರವೀಣ ಬೇಸರ ವ್ಯಕ್ತಪಡಿಸಿ ಅಲ್ಲಿಂದ ನಿರ್ಗಮಿಸಿದ.

Last Updated : Nov 1, 2020, 6:27 PM IST

ABOUT THE AUTHOR

...view details