ಕರ್ನಾಟಕ

karnataka

ETV Bharat / state

ಅಂಜನಾದ್ರಿಯ ಹನುಮನ ಬೆಟ್ಟದಲ್ಲಿನ ಹತ್ತೂ ಕಾಣಿಕೆ ಹುಂಡಿ ಭರ್ತಿ - kanike hundi fills in anjanadri hanuma hill temple

ಧಾರ್ಮಿಕ ತಾಣವಾದ ಅಂಜನಾದ್ರಿ ಬೆಟ್ಟದಲ್ಲಿ ಹತ್ತು ಕಾಣಿಕೆ ಪೆಟ್ಟಿಗೆ ಭರ್ತಿಯಾಗಿದ್ದು, ಎಣಿಕೆ ಕಾರ್ಯ ನಡೆಸಲಾಗುತ್ತಿದೆ. ಕಾಣಿಕೆಯ ಆದಾಯ ಹತ್ತು ಲಕ್ಷ ರೂಪಾಯಿ ಮೀರಬಹುದು ಎಂದು ಅಂದಾಜಿಸಲಾಗಿದೆ.

ಕಾಣಿಕೆ ಹುಂಡಿ ಫುಲ್
ಕಾಣಿಕೆ ಹುಂಡಿ ಫುಲ್

By

Published : Dec 30, 2019, 1:26 PM IST

ಗಂಗಾವತಿ: ತಾಲೂಕಿನ ಐತಿಹಾಸಿಕ ಧಾರ್ಮಿಕ ತಾಣವಾದ ಅಂಜನಾದ್ರಿ ಬೆಟ್ಟದಲ್ಲಿ ಭಕ್ತರ ಕಾಣಿಕೆ ಸಂಗ್ರಹಣೆಗಾಗಿ ಕಂದಾಯ ಇಲಾಖೆ ಇರಿಸಿದ್ದ ಹತ್ತು ಕಾಣಿಕೆ ಪೆಟ್ಟಿಗೆ ಭರ್ತಿಯಾಗಿದ್ದು, ಸೋಮವಾರ ಪೆಟ್ಟಿಗೆ ತೆಗೆದು ಹಣ ಎಣಿಕೆ ಕಾರ್ಯ ನಡೆಸಲಾಗುತ್ತಿದೆ.

ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ಹಾಗೂ ದೇಗುಲದ ಆಡಳಿತ ಮಂಡಳಿ ಕಾರ್ಯದರ್ಶಿ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಅವರ ನೇತೃತ್ವದಲ್ಲಿ ಕಾಣಿಕೆ ಪೆಟ್ಟಿಗೆ ತೆರೆಯುವ ಕಾರ್ಯ ಆರಂಭಿಸಲಾಗಿದೆ. ದೇಗುಲದಲ್ಲಿ ಐದು ಸ್ಥಿರ ಹಾಗೂ ಐದು ಒಂದು ಸ್ಥಳದಲ್ಲಿಂದ ಮತ್ತೊಂದು ಸ್ಥಳಕ್ಕೆ ಒಯ್ಯಬಹುದಾದ ಕಾಣಿಕೆ ಪೆಟ್ಟಿಗೆ ಇಡಲಾಗಿದೆ.

ಕಾಣಿಕೆ ಎಣಿಕೆ ಕಾರ್ಯ

ಇದೇ ಮೊದಲ ಬಾರಿಗೆ ಹತ್ತೂ ಪೆಟ್ಟಿಗೆ ಭರ್ತಿಯಾಗಿದ್ದು, ಕಾಣಿಕೆಯ ಆದಾಯ ಹತ್ತು ಲಕ್ಷ ರೂಪಾಯಿ ಮೀರಬಹುದು ಎಂದು ಅಂದಾಜಿಸಲಾಗಿದೆ. ನ.30ರಂದು ಹುಂಡಿ ತೆಗೆಯಲಾಗಿತ್ತು. ಒಂದು ತಿಂಗಳ ಅಂತರದಲ್ಲಿ ಅಂದರೆ ಹನುಮ ಜಯಂತಿ (ಡಿ.9) ಮುಗಿದ ಬಳಿಕ ಮೊದಲ ಬಾರಿಗೆ ಹುಂಡಿ ತೆಗೆಯಲಾಗುತ್ತಿದೆ. ಸಂಜೆವರೆಗೂ ಹಣ ಎಣಿಕೆ ಕಾರ್ಯ ನಡೆಯಲಿದೆ ಎಂದು ಕಂದಾಯ ಸಿಬ್ಬಂದಿ ತಿಳಿಸಿದ್ದಾರೆ.

ABOUT THE AUTHOR

...view details