ಕರ್ನಾಟಕ

karnataka

ETV Bharat / state

ಸಿಎಂ ಕೈ,ಕಾಲು ಹಿಡಿದಾದರೂ ಕ್ಷೇತ್ರದ ಅಭಿವೃದ್ಧಿ ಮಾಡಿಸುವೆ: ಕನಕಗಿರಿ ಶಾಸಕ - Kanakagiri MLA

ತುಂಗಭದ್ರಾ ಎಡದಂಡೆ ನಾಲೆಯ ಮೂಲಕ ಎರಡನೇ ಬೆಳೆಗೆ ನೀರು ಬಿಡಿಸಿ ಕೃಷಿ ಚಟುವಟಿಕೆ ಕೈಗೊಳ್ಳಲು ನೆರವಾದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರು ಅವರಿಗೆ ಬೂದಗುಂಪಾ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

Kanakagiri MLA Basavaraja dadesuguru adress his people
ಸಿಎಂ ಕೈಕಾಲು ಹಿಡಿದಾದರೂ ಕ್ಷೇತ್ರದ ಅಭಿವೃದ್ಧಿ ಮಾಡಿಸುವೆ: ಕನಕಗಿರಿ ಶಾಸಕ

By

Published : May 10, 2020, 3:51 PM IST

ಗಂಗಾವತಿ(ಕೊಪ್ಪಳ): ಸಿಎಂ ಕೈ,ಕಾಲು ಹಿಡಿದಾದರೂ ಕ್ಷೇತ್ರದ ಅಭಿವೃದ್ಧಿ ಯೋಜನೆಗಳನ್ನು ಮಾಡಿಸಿಕೊಂಡು ಬರುವೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಹೇಳಿದರು.

ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಕ್ಷೇತ್ರದ ಶಾಸಕನಾಗಿ ರೈತರ ಯಾವುದೇ ಸಮಸ್ಯೆ ಪರಿಹಾರಕ್ಕೆ ಮೊದಲು ಸ್ಪಂದಿಸುತ್ತೇನೆ. ನನ್ನಿಂದ ಆಗದಿದ್ದರೂ ಸಿಎಂಗೆ ದುಂಬಾಲು ಬಿದ್ದಾದರೂ ಕ್ಷೇತ್ರದ ಜನರ ಅಗತ್ಯ ಕೆಲಸ ಮಾಡಿಸುತ್ತೇನೆ ಎಂದರು.

ಕಾರಟಗಿ ಪಟ್ಟಣದಲ್ಲಿರುವ ಶಾಸಕರ ಕಚೇರಿಗೆ ತೆರಳಿದ ಬೂದಗುಂಪಾ ಗ್ರಾಮಸ್ಥರು, ಕೃಷಿ ಚಟುವಟಿಕೆಗೆ ಪೂರಕವಾಗುವಂತೆ ಕಳೆದ ಮೂರು ತಿಂಗಳಿಂದ ಸತತ ವಿದ್ಯುತ್ ಪೂರೈಸಿದ ಹಾಗೂ ತುಂಗಭದ್ರಾ ನಾಲೆಯಿಂದ ಎರಡನೇ ಬೆಳಗೆ ನೀರು ಬಿಡಿಸಿದ್ದಕ್ಕೆ ಕೃತಜ್ಞತಾಪೂರ್ವಕವಾಗಿ ಶಾಸಕರನ್ನು ಸನ್ಮಾನಿಸಿದರು.

ABOUT THE AUTHOR

...view details