ಕೊಪ್ಪಳ:ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿದ್ದು, ನಿಷೇಧ ಮತ್ತೆ ಮುಂದುವರೆದಿದೆ. ಜಿಲ್ಲೆಯ ಐತಿಹಾಸಿಕ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನವನ್ನು ಸೆಪ್ಟಂಬರ್ 5 ರವರೆಗೆ ಬಂದ್ ಮಾಡಿ ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರಡ್ಡಿ ಆದೇಶ ಹೊರಡಿಸಿದ್ದಾರೆ.
ಐತಿಹಾಸಿಕ ಕನಕಗಿರಿಯ ಕನಕಾಚಲಪತಿ ದೇವಸ್ಥಾನ ಬಂದ್: ಉಪವಿಭಾಗಾಧಿಕಾರಿ ಆದೇಶ - Koppal Covid
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನವನ್ನು ಸೆಪ್ಟಂಬರ್ 5 ರವರೆಗೆ ಬಂದ್ ಮಾಡಿ ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರಡ್ಡಿ ಆದೇಶ ಹೊರಡಿಸಿದ್ದಾರೆ.
'ಕಣ್ಣಿದ್ದವರು ಹಂಪೆ ನೋಡಬೇಕು, ಕಾಲಿದ್ದವರು ಕನಕಗಿರಿ ನೋಡಬೇಕು' ಎಂಬ ನಾಣ್ಣುಡಿ ಇದೆ. ಇಂತಹ ಕನಕಗಿರಿ ದೇವಸ್ಥಾನಕ್ಕೆ ಈಗ ಶ್ರಾವಣ ಮಾಸವಾಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈಗಾಗಲೇ ಹುಲಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನ ಹಾಗೂ ಅಂಜನಾದ್ರಿ ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧಿಸಿದ್ದು, ಕನಕಾಚಲ ದೇವಸ್ಥಾನವನ್ನೂ ಈಗ ಸೆಪ್ಟಂಬರ್ 5ರವರೆಗೆ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ಈ ದೇವಸ್ಥಾನಗಳಲ್ಲಿ ನಿತ್ಯ ಪೂಜಾ ಕೈಂಕರ್ಯಗಳಿಗೆ ಮಾತ್ರ ಅನುಮತಿ ನೀಡಿದ್ದು, ಯಥಾ ಪ್ರಕಾರ ಪೂಜೆಗಳು ಜರುಗಲಿವೆ. ಆದರೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.