ಗಂಗಾವತಿ: ತುಂಗಭದ್ರಾ ನದಿಗೆ ಹೆಚ್ಚಿನ ನೀರನ್ನು ಹರಿಸುತ್ತಿರುವ ಕಾರಣ ಕಂಪ್ಲಿ ಸೇತುವೆಯ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಗಂಗಾವತಿಯಿಂದ ಕಂಪ್ಲಿಗೆ 11 ಕಿ.ಮೀ. ಕ್ರಮಿಸುವ ಬದಲು 38 ಕಿಲೋಮೀಟರ್ ದೂರ ಪ್ರಯಾಣಿಸುವಂತಾಗಿದೆ.
ಕಂಪ್ಲಿ ಸೇತುವೆ ಬಹುತೇಕ ಮುಳುಗಡೆ... ಸಂಚಾರ ಸ್ಥಗಿತ, ಪ್ರಯಾಣಿಕರಿಗೆ ಪರದಾಟ - ಆನೆಗೊಂದಿ
ಈಗಾಗಲೇ 80 ಸಾವಿರ ಕ್ಯೂಸೆಕ್ ನೀರು ಹರಿಸಿದ್ದು, ಸೇತುವೆ ಮುಳುಗಡೆಗೆ ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ. ಹೀಗಾಗಿ ಕಂಪ್ಲಿ ಸೇತುವೆಯ ಮೇಲೆ ಸಂಚಾರ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಗಂಗಾವತಿಯಿಂದ ಕಂಪ್ಲಿಗೆ 11 ಕಿಲೋ ಮೀಟರ್ ಕ್ರಮಿಸುವ ಬದಲು 38 ಕಿ.ಮೀ. ದೂರ ಪ್ರಯಾಣಿಸುವಂತಾಗಿದೆ.
ಮುಳುಗಡೆ ಭಿತಿಯಲ್ಲಿ ಕಂಪ್ಲಿ ಸೇತುವೆ..
ಗಂಗಾವತಿಯಿಂದ ಕಂಪ್ಲಿಗೆ ಹೋಗಲು ಆನೆಗೊಂದಿ ಸಮೀಪದ ಕಡೆಬಾಗಿಲು-ಬುಕ್ಕಸಾಗರದ ಸೇತುವೆ ಮೂಲಕ 38 ಕಿ.ಮೀ. ಪ್ರಯಾಣಿಸಬೇಕಾದ ಸ್ಥಿತಿ ಎದುರಾಗಿದೆ. ನದಿಗೆ ಈಗಾಗಲೇ 80 ಸಾವಿರ ಕ್ಯೂಸೆಕ್ ನೀರು ಹರಿಸಿದ್ದು, ಸೇತುವೆ ಮುಳುಗಡೆಗೆ ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ.
ಸದ್ಯ ದ್ವಿಚಕ್ರ ವಾಹನ ಮತ್ತು ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಸರಕು ಸಾಗಣಿಕೆ ಮತ್ತು ಭಾರಿ ವಾಹನಗಳ ಸಂಚಾರವನ್ನು ಬಳ್ಳಾರಿ ಮತ್ತು ಕೊಪ್ಪಳ ಉಭಯ ಜಿಲ್ಲೆಗಳ ಪೊಲೀಸರು ಸ್ಥಗಿತಗೊಳಿಸಿದ್ದಾರೆ.
Last Updated : Sep 9, 2019, 11:04 AM IST