ಗಂಗಾವತಿ : ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಸ್ವತಃ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮತ್ತು 371 (ಜೆ) ಕಲಂ ಅನುಷ್ಠಾನ ಸಮಿತಿಯೇ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಕಲ್ಯಾಣ ಕರ್ನಾಟಕ ನಾಮಕರಣ ಬೇಡ: ಹೈಕ ಸಮಿತಿಯಿಂದಲೇ ವಿರೋಧ
ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಸರ್ಕಾರದ ನಿರ್ಧಾರವನ್ನು ಸ್ವತಃ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮತ್ತು 371 (ಜೆ) ಕಲಂ ಅನುಷ್ಠಾನ ಸಮಿತಿಯೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಈ ಬಗ್ಗೆ ಮಾತನಾಡಿದ ಹೋರಾಟ ಸಮಿತಿ ಕಾರ್ಯದರ್ಶಿ ಹಾಗೂ ಅನುಷ್ಠಾನ ಸಮಿತಿ ಸಂಚಾಲಕ ಧನರಾಜ್, ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಅದು ಈ ಭಾಗದ ಜನರಿಗೆ ಡೇಂಜರ್ ಆಗಿ ಪರಿವರ್ತನೆಯಾಗಲಿದೆ. ಸಂವಿಧಾನ ಬದ್ಧವಾಗಿ ಹೆಸರು ಬದಲಾವಣೆಯಾದರೆ ಮಾತ್ರ ಅದು ಸರಿಯಾಗುತ್ತದೆ. ಹೆಸರಿಡಲು ತಕರಾರಿಲ್ಲ. ಆದರೆ ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಕಲ್ಯಾಣ ಎಂಬುವುದು ಒಂದು ಜಾತಿಗೆ ಸೀಮಿತವಾಗುತ್ತದೆ ಎಂಬ ಅಭಿಪ್ರಾಯವಿದೆ ಎಂದರು.
ಈ ಬಗ್ಗೆ ಸರ್ಕಾರ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಹೆಸರಿಡಬೇಕು. ಕಲ್ಯಾಣ ಅದು ರಾಜ್ಯದ ಸಂಕೇತ ಹಾಗೂ ಬಸವಣ್ಣನ ಪೂರ್ವದಲ್ಲಿನ ರಾಜ್ಯ, ಅದರ ಬಗ್ಗೆ ಗೌರವಿದೆ. ಆದರೆ ಇದೇ ನೆಪವಿಟ್ಟುಕೊಂಡು ಕೋರ್ಟ್ನಲ್ಲಿ ಹೈಕ ಮೀಸಲಾತಿಗೆ ತಕರಾರು ತೆಗೆಯೋರು ಬಹಳ ಜನ ಇದ್ದಾರೆ ಎಂದು ಧನರಾಜ್ ಹೇಳಿದರು.