ಗಂಗಾವತಿ:ಜಾತ್ರೆ, ರಥೋತ್ಸವಗಳಲ್ಲಿ ದೇವರ ಚಿತ್ರಗಳನ್ನು ಮೆರವಣಿಗೆ ಮಾಡುವುದು ಸಹಜ. ಆದರೆ ಗ್ರಾಮ ದೈವದ ರಥೋತ್ಸವದ ಸಂದರ್ಭದಲ್ಲಿ ಅಗಲಿದ ನಟ ಪುನೀತ್ ರಾಜ್‌ಕುಮಾರ್ ಚಿತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸುವ ಮೂಲಕ ಅಭಿಮಾನಿಗಳು ಗಮನ ಸೆಳೆದ ಘಟನೆ ಕಾರಟಗಿ ತಾಲೂಕಿನಲ್ಲಿ ನಡೆಯಿತು.
'ಮಗನಿಗೆ ಹುಡುಗಿ ಸಿಗಲಿ' ಎಂದು ಹರಕೆ: ರಥೋತ್ಸವದಲ್ಲಿ ಪುನೀತ್ ಭಾವಚಿತ್ರ ಮೆರವಣಿಗೆ - ಗಂಗಾವತಿಯ ಕಲ್ಲೇಶ್ವರ ದೇವರ ರಥೋತ್ಸವದಲ್ಲಿ ಪುನಿತ್ ಭಾವಚಿತ್ರ ಮೆರವಣಿಗೆ
ಕಲ್ಲೇಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತನ್ನ ಮಗನಿಗೆ ಮದುವೆ ಮಾಡಲು ಸೂಕ್ತ ಹುಡುಗಿ ಸಿಗಲಿ ಎಂದು ಹರಕೆ ಹೊತ್ತು ರಥಕ್ಕೆ ಬಾಳೆ ಹಣ್ಣು ಎಸೆದಿದ್ದಾರೆ.

ರಥೋತ್ಸವದಲ್ಲಿ ಪುನಿತ್ ಭಾವಚಿತ್ರ ಮೆರವಣಿಗೆ
ಬೆನ್ನೂರು ಗ್ರಾಮದಲ್ಲಿ ನಡೆದ ಕಲ್ಲೇಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿ ಭಕ್ತರು ತೇರು ಎಳೆದರು. ಈ ಸಂದರ್ಭದಲ್ಲಿ ಅಪ್ಪು ಅವರ ನೂರಾರು ಅಭಿಮಾನಿಗಳು, ಭಾವಚಿತ್ರ ಹಿಡಿದು ಮೆರವಣಿಗೆ ಮಾಡಿದರು.
ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತನ್ನ ಮಗನಿಗೆ ಮದುವೆ ಮಾಡಲು ಸೂಕ್ತ ಹುಡುಗಿ ಸಿಗಲಿ ಎಂದು ಬಾಳೆಹಣ್ಣಿನಲ್ಲಿ ಬರೆದು ರಥಕ್ಕೆ ಎಸೆದಿದ್ದಾರೆ. ಈ ಬಾಳೆ ಹಣ್ಣು ಇತರೆ ಭಕ್ತರೊಬ್ಬರ ಕೈಗೆ ಸಿಕ್ಕಿತು.