ಕರ್ನಾಟಕ

karnataka

ETV Bharat / state

ಅಂಗನವಾಡಿ ಮಕ್ಕಳಿಗೆ ಕೊರೊನಾ ತಗುಲಿದರೆ ಯಾರು ಹೊಣೆ: ಕಲಾವತಿ‌ ಮೆಣೆದಾಳ ಪ್ರಶ್ನೆ - Anganwadi

1ರಿಂದ 5ನೇ ತಗರತಿ ಮಕ್ಕಳ ಶಾಲೆ ಆರಂಭವಾಗಿಲ್ಲ. ಕೊರೊನಾ ಭಯ ಅಂಗನವಾಡಿ ಮಕ್ಕಳಿಗೆ ಇಲ್ಲವೆ ಎಂದು ‌ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಕಲಾವತಿ‌ ಮೆಣೆದಾಳ ಪ್ರಶ್ನಿಸಿದ್ದಾರೆ.

Kalawati Medal
ಕಲಾವತಿ‌

By

Published : Feb 11, 2021, 9:40 PM IST

ಕುಷ್ಟಗಿ:ಕೋವಿಡ್ ಮಾರ್ಗಸೂಚಿಯನ್ವಯ ಅಂಗನವಾಡಿ ಕೇಂದ್ರ ಆರಂಭಿಸಿದರೆ ಮಕ್ಕಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನಿಯಮಾವಳಿ ಪ್ರಕಾರ ನಡೆಸುವುದು ಅಸಾಧ್ಯ ಎಂದು ಅಂಗನವಾಡಿ ರಾಜ್ಯ ಉಪಾಧ್ಯಕ್ಷೆ ಕಲಾವತಿ‌ ಮೆಣೆದಾಳ ಹೇಳಿದ್ದಾರೆ.

ಕಲಾವತಿ‌

ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ಈ ಕ್ರಮದಿಂದ ಅಂಗನವಾಡಿ ಕಾರ್ಯಕರ್ತೆಯರು ಸದ್ಯ ಗೊಂದಲದ ಪರಿಸ್ಥಿತಿ ಎದುರಿಸುವಂತಾಗಿದೆ. ಸರ್ಕಾರದ ಆದೇಶದನ್ವಯ ಅಂಗನವಾಡಿ ಕೇಂದ್ರ ಆರಂಭಿಸಿ ಮಕ್ಕಳಿಗೆ ಸೋಂಕು ವ್ಯಾಪಿಸಿದರೆ ಅಂಗನವಾಡಿ ಕೇಂದ್ರದ‌ ಕಾರ್ಯಕತೆಯರು ಅದರ ಹೊಣೆ ಹೊರಲು ಸಾಧ್ಯವಿಲ್ಲ. ಅದರ‌ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿಕೊಳ್ಳಬೇಕು. ಹೈಕೋರ್ಟ್​ ಅಂಗನವಾಡಿ ಕೇಂದ್ರ ಆರಂಭಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ ಶಶಿಕಲಾ ಜೊಲ್ಲೆ ಸಚಿವ ಸಂಪುಟ ಸಭೆ ಬಳಿಕ ಅಂಗನವಾಡಿ ಮಕ್ಕಳು ಚಿಕ್ಕವರಾಗಿದ್ದು, ಪ್ರಾಥಮಿಕ ಶಾಲೆಗಳು ಆರಂಭಿಸದೇ ಅಂಗನವಾಡಿ ಕೇಂದ್ರ ತೆರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿ ನಂತರ ನಿಲುವು ಬದಲಿಸಿದ್ದಾರೆಂದು ಕಲಾವತಿ ಮೆಣೆದಾಳ ಆರೋಪಿಸಿದ್ದಾರೆ.

ABOUT THE AUTHOR

...view details