ಕುಷ್ಟಗಿ / ಕೊಪ್ಪಳ : ಕುಷ್ಟಗಿ ಪಟ್ಟಣದ ಹನುಮಸಾಗರ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಎಸ್ ಸಿ ಮೆಟ್ರಿಕ್ ಪೂರ್ವ ವಸತಿ ನಿಲಯದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ಇಂದು ನ್ಯಾಯಾಧೀಶರು ಭೇಟಿ ನೀಡಿ ಮೂಲ ಸೌಕರ್ಯಗಳ ಕುರಿತು ಪರಿಶೀಲಿಸಿದರು.
ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿದ ಜಡ್ಜ್: ಮೂಲ ಸೌಕರ್ಯ ಪರಿಶೀಲನೆ - Koppal quarantine center news
ಕುಷ್ಟಗಿ ಪಟ್ಟಣದ ಹನುಮಸಾಗರ ರಸ್ತೆಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಕ್ಕೆ ನ್ಯಾಯಾಧೀಶರು ಭೇಟಿ ನೀಡಿ ಮೂಲ ಸೌಕರ್ಯಗಳ ಕುರಿತು ಪರಿಶೀಲಿಸಿದರು.
Koppal
ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎಸ್. ಹೊನ್ನುಸ್ವಾಮಿ, ಸಿವಿಲ್ ನ್ಯಾಯಾಲಯದ ಚಂದ್ರಶೇಖರ ತಳವಾರ ಭೇಟಿ ನೀಡಿ ವಸತಿ ನಿಲಯದ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಬೆಳಕು, ಬೆಡ್ ಇತ್ಯಾದಿ ವ್ಯವಸ್ಥೆಯ ಕುರಿತು ದ್ಯಾಮಣ್ಣ ಕರೇಕಲ್ ಅವರಿಂದ ಮಾಹಿತಿ ಪಡೆದರು. ಇದೇ ವೇಳೆ, ತಹಶೀಲ್ದಾರ್ ಎಂ.ಸಿದ್ದೇಶ ಉಪಸ್ಥಿತರಿದ್ದರು.