ಕುಷ್ಟಗಿ (ಕೊಪ್ಪಳ): ಲಾಕ್ಡೌನ್ ಸಡಿಲಿಕೆಯನ್ನೇ ನೆಪವಾಗಿಸಿಕೊಂಡು ಮಾಸ್ಕ್ ಧರಿಸದೇ ಸಂಚರಿಸುತ್ತಿರುವ ಸವಾರರಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಎಚ್ಚರಿಕೆ.... ಮಾಸ್ಕ್ ಇಲ್ಲದೇ ಸಂಚರಿದರೆ ಬೀಳುತ್ತೆ ದಂಡ - Penalties for motorists
ಲಾಕ್ಡೌನ್ ಸಡಿಲಿಕೆಯನ್ನೇ ನೆಪವಾಗಿಸಿಕೊಂಡು ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
![ಎಚ್ಚರಿಕೆ.... ಮಾಸ್ಕ್ ಇಲ್ಲದೇ ಸಂಚರಿದರೆ ಬೀಳುತ್ತೆ ದಂಡ Joint operation of municipal authorities and police](https://etvbharatimages.akamaized.net/etvbharat/prod-images/768-512-7153978-820-7153978-1589206722223.jpg)
ಸವಾರನಿಗೆ ದಂಡ ವಿಧಿಸುತ್ತಿರುವುದು
ಹಸಿರು ವಲಯ (ಗ್ರೀನ್ ಝೋನ್) ಕೊಪ್ಪಳದಲ್ಲಿ ಮಾಸ್ಕ್ ಹಾಕಿಕೊಳ್ಳದೇ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣ ನಿರ್ಧಾರಕ್ಕೆ ಬರಲಾಗಿದೆ. ಈ ಮೊದಲು ದಂಡ ವಿಧಿಸಲು ಅವಕಾಶ ಇದ್ದರೂ ಎಚ್ಚರಿಕೆ ಮಾತ್ರ ನೀಡಲಾಗುತ್ತಿತ್ತು.
ಬಸವೇಶ್ವರ ವೃತ್ತದಲ್ಲಿ ಸೋಮವಾರ ಪುರಸಭೆ ಅಧಿಕಾರಿಗಳು, ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾಸ್ಕ್ ಧರಿಸದವರಿಗೆ ₹ 200 ದಂಡ ಹಾಕಲಾಗಿದೆ.