ಕುಷ್ಟಗಿ(ಕೊಪ್ಪಳ):ಪಟ್ಟಣದ ವಿವಿಧ ಬೀಜ, ಗೊಬ್ಬರ, ಕ್ರಿಮಿನಾಶಕ ಪರಿಕರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕಿ ಶಬನಾ ಶೇಖ್ ಭೇಟಿ ನೀಡಿ ಕೆಲ ಸೂಚನೆಗಳನ್ನು ನೀಡಿದರು.
ಕೃಷಿ ಪರಿಕರ ಮಳಿಗೆಗಳಿಗೆ ಕುಷ್ಟಗಿ ಜಂಟಿ ಕೃಷಿ ನಿರ್ದೇಶಕಿ ಭೇಟಿ - ಕೊಪ್ಪಳ ಜಿಲ್ಲೆಯ ಕುಷ್ಟಗಿ
2020-21ನೇ ಸಾಲಿನಲ್ಲಿ ಮುಂಗಾರು ಬಿತ್ತನೆ ಆರಂಭವಾಗುತ್ತಿದ್ದಂತೆ ರೈತರು ಪ್ರಮಾಣೀಕರಿಸಿದ ಬಿತ್ತನೆ ಬೀಜ ಖರೀದಿಸಿ, ಖರೀದಿಸಿದ ರಸೀದಿ, ಬೀಜದ ದಾಸ್ತಾನು ಚೀಲವನ್ನು ಬೆಳೆ ಕಟಾವು ಆಗುವರೆಗೂ ಕಾಯ್ದಿರಿಸುವಂತೆ ರೈತಾಪಿ ವರ್ಗಕ್ಕೆ ಮಾಹಿತಿ ನೀಡಿ ಎಂದು ಕೃಷಿ ಪರಿಕರ ಮಾರಟಗಾರರಿಗೆ ಜಂಟಿ ಕೃಷಿ ನಿರ್ದೇಶಕಿ ಶಬನಾ ಶೇಖ್ ಸೂಚಿಸಿದ್ದಾರೆ.
2020-21ನೇ ಸಾಲಿನಲ್ಲಿ ಮುಂಗಾರು ಬಿತ್ತನೆ ಆರಂಭವಾಗುತ್ತಿದ್ದಂತೆ ರೈತರು ಪ್ರಮಾಣೀಕರಿಸಿದ ಬಿತ್ತನೆ ಬೀಜ ಖರೀದಿಸಿ, ಖರೀದಿಸಿದ ರಸೀದಿ, ಬೀಜದ ದಾಸ್ತಾನು ಚೀಲವನ್ನು ಬೆಳೆ ಕಟಾವು ಆಗುವರೆಗೂ ಕಾಯ್ದಿರಿಸುವಂತೆ ರೈತಾಪಿ ವರ್ಗಕ್ಕೆ ಮಾಹಿತಿ ನೀಡಿ ಎಂದು ಕೃಷಿ ಪರಿಕರ ಮಾರಟಗಾರರಿಗೆ ಜಂಟಿ ಕೃಷಿ ನಿರ್ದೇಶಕಿ ಶಬನಾ ಶೇಖ್ ಸೂಚಿಸಿದರು.
ತಾಲೂಕಿನ ಕೃಷಿ ಪರಿಕರಗಳ ಮಾರಾಟಗಾರರು ಕಡ್ಡಾಯವಾಗಿ ಪ್ರಮಾಣೀಕರಿಸಿದ ಬೀಜ ಮಾರಾಟ ಮಾಡಬೇಕು. ರೈತರು ಬೀಜ ಖರೀದಿದಾಗ ಪರಿಕರ ಮಾರಾಟಗಾರರು ಕಡ್ಡಾಯವಾಗಿ ರಸೀದಿ ನೀಡಬೇಕು. ಪ್ರತಿಯೊಂದು ಪರಿಕರದ ನಿಖರ ಬೆಲೆಯನ್ನು ಸೂಚನಾ ಫಲಕದಲ್ಲಿ ನಮೂದಿಸಬೇಕು. ಕಂಪನಿಯು ನಿರ್ದಿಷ್ಟಪಡಿಸಿದ ದರದಲ್ಲಿ ಸಾಮಾಗ್ರಿಗಳನ್ನು ಮಾರಾಟ ಮಾಡುವ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ದರ ಪಟ್ಟಿ ಹಾಗೂ ಸ್ಟಾಕ್ ರಜಿಸ್ಟರ್ನಲ್ಲಿ ದಾಸ್ತಾನು ನಮೂದಿಸದ ಕೆಲ ಕೃಷಿ ಪರಿಕರ ಮಳಿಗೆಗಳಿಗೆ ನೋಟಿಸ್ ನೀಡಿದರು.