ಕರ್ನಾಟಕ

karnataka

ETV Bharat / state

ಜೆಎನ್​​ಯು ವಿವಾದ: ರಾಷ್ಟ್ರಪತಿ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ ಎಸ್ಎಫ್ಐ ಸಂಘಟನೆ - ಕೊಪ್ಪಳ ಜಿಲ್ಲಾ ಅಧ್ಯಕ್ಷ ಅಮರೇಶ ಕಡಗದ ಆಕ್ರೋಶ

ದೆಹಲಿಯ ಜವಾಹರ್​ ಲಾಲ್ ನೆಹರು ವಿಶ್ವ ವಿದ್ಯಾಲಯದಲ್ಲಿ (ಜೆಎನ್​ಯು) ವಸತಿ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಲಾಠಿ ಪ್ರಹಾರ ನಡೆಸಿದ್ದನ್ನು ಎಸ್ಎಫ್ಐ ಸಂಘಟನೆ ಖಂಡಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.

ಜೆಎನ್ ಯು ವಿವಾದ: ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದ ಎಸ್ಎಫ್ಐ ಸಂಘಟನೆ

By

Published : Nov 21, 2019, 2:19 AM IST

ಗಂಗಾವತಿ:ದೆಹಲಿಯ ಜವಾಹರ್​ಲಾಲ್ ನೆಹರು ವಿಶ್ವ ವಿದ್ಯಾಲಯದಲ್ಲಿ (ಜೆಎನ್​​ಯು) ವಸತಿ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಲಾಠಿ ಪ್ರಹಾರ ನಡೆಸಿದ್ದನ್ನು ಎಸ್ಎಫ್ಐ ಸಂಘಟನೆ ಖಂಡಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.

ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಕೇಳುವ ಉದ್ದೇಶದಿಂದ ಪ್ರತಿಭಟನೆ ಮೂಲಕ ಯತ್ನಿಸಿದ್ದಾರೆ. ಆದರೆ ವಿದ್ಯಾರ್ಥಿಗಳನ್ನು ಹತ್ತಿಕ್ಕುವ ಉದ್ದೇಶಕ್ಕೆ ಸರ್ಕಾರ ಅವರ ಮೇಲೆ ಲಾಠಿ ಪ್ರಹಾರ ನಡೆಸಿದೆ. ಲಾಠಿ ಪ್ರಹಾರ, ನಕಲಿ ದೂರುಗಳನ್ನು ದಾಖಲಿಸುವ ಮೂಲಕ ವಿದ್ಯಾರ್ಥಿಗಳ ಶಕ್ತಿಯನ್ನು ಯಾವ ಸರ್ಕಾರಗಳು ಹತ್ತಿಕ್ಕಲಾರವು' ಎಂದು ಸಂಘಟನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಅಮರೇಶ ಕಡಗದ ಆಕ್ರೋಶ ವ್ಯಕ್ತಪಡಿಸಿದರು. ಜೆಎನ್​ಯು ವಿವಾದದಲ್ಲಿ ರಾಷ್ಟ್ರಪತಿಗಳು ತಕ್ಷಣವೇ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

For All Latest Updates

ABOUT THE AUTHOR

...view details